ADVERTISEMENT

ಹೈಕೋರ್ಟ್‌ಗಳಿಗೆ 13 ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸು

ಪಿಟಿಐ
Published 18 ಅಕ್ಟೋಬರ್ 2023, 9:50 IST
Last Updated 18 ಅಕ್ಟೋಬರ್ 2023, 9:50 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ದೇಶದ ವಿವಿಧ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸಲು 13 ಮಂದಿ ವಕೀಲರ ಹೆಸರನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ನೇತೃತ್ವದ ಸುಪ್ರೀಂ ಕೋರ್ಟ್‌ ಕೊಲಿಜಿಯಂ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ ಅವರೂ ಸದಸ್ಯರಾಗಿರುವ ಕೊಲಿಜಿಯಂ ಸಮಿತಿಯು, ವಕೀಲರಾದ ಎನ್‌. ಉನ್ನೀಕೃಷ್ಣನ್‌ ಹಾಗೂ ಕೌಶಿಕ್‌ ಗೋಸ್ವಾಮಿ ಅವರನ್ನು ಗುವಾಹಟಿ ಹೈಕೋರ್ಟ್‌ನ ನ್ಯಾಯಮೂರ್ತಿಗಳನ್ನಾಗಿ ನೇಮಿಸಿ ಎಂದು ಶಿಫಾರಸು ಮಾಡಿದೆ.

ADVERTISEMENT

ವಕೀಲರಾದ ಸಿದ್ದಾರ್ಥ್ ಶಾ ಹಾಗೂ ಅಲೋಕ್ ಮಹ್ರಾ ಅವರನ್ನು ಉತ್ತರಾಖಂಡ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿಯೂ, ವಕೀಲರಾದ ಹಮ್ರಿತ್‌ ಸಿಂಗ್ ಗ್ರೆವಾಲ್‌, ದೀಪಿಂದರ್‌ ಸಿಂಗ್‌ ನಲ್ವ, ಸುಮಿತ್‌ ಗೋಯಲ್‌, ಸುದೀಪ್ತಿ ಶರ್ಮಾ ಹಾಗೂ ಕೀರ್ತಿ ಸಿಂಗ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಬೇಕು ಎಂದು ಕೊಲಿಜಿಯಂ ಶಿಫಾರಸಿನಲ್ಲಿ ಹೇಳಿದೆ.

ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ವಿನಯ್‌ ಸರಫ್‌, ವಿವೇಕ್‌ ಜೈನ್‌, ಆಶಿಶ್‌ ಶ್ರೋಟಿ ಹಾಗೂ ಅಮಿತ್‌ ಸೇಠ್ ಅವರನ್ನು ನೇಮಕ ಮಾಡಬೇಕು ಎಂದೂ ಕೊಲಿಜಿಯಂ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.