
ನವದೆಹಲಿ: ರಾಜಸ್ಥಾನದ ಅಜ್ಮೀರ್ ದರ್ಗಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಾದರ ಹೊದಿಸದಂತೆ ನಿರ್ಬಂಧಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಇಸ್ಲಾಮಿಕ್ ವಿದ್ವಾಂಸ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಹಾಗೂ ಅಜ್ಮೀರ್ ದರ್ಗಾಕ್ಕೆ ಸರ್ಕಾರಿ ಪ್ರಾಯೋಜಿತ ಗೌರವ ಸಲ್ಲಿಕೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠ, ‘ಈ ವಿಷಯವು ನ್ಯಾಯಸಮ್ಮತವಲ್ಲ ಅಲ್ಲದ ಕಾರಣ ನ್ಯಾಯಪೀಠವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ತಿಳಿಸಿದೆ.
‘ಶಿವನ ದೇವಾಲಯವನ್ನು ನಾಶಗೊಳಿಸಿ, ಅಜ್ಮೇರ್ ದರ್ಗಾ ನಿರ್ಮಾಣ ಮಾಡಲಾಗಿದೆ. ಯಾವುದೇ ಸಾಂವಿಧಾನಿಕ ಹಾಗೂ ಕಾನೂನಿನ ಮಾನ್ಯತೆ ಇಲ್ಲದೇ 1947ರಿಂದಲೂ ಪ್ರಧಾನಿ ಅವರು ಚಾದರ ಅರ್ಪಿಸಿಕೊಂಡು ಬರುತ್ತಿದ್ದಾರೆ’ ಎಂದು ಆರೋಪಿಸಿ ಜಿತೇಂದರ್ ಸಿಂಗ್ ಹಾಗೂ ಇತರರ ಪರವಾಗಿ ವಕೀಲ ಬರೂನ್ ಸಿನ್ಹಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.