ADVERTISEMENT

ನಿರ್ಭಯಾ: ಅಪರಾಧಿ ಪವನ್‌ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಪಿಟಿಐ
Published 20 ಜನವರಿ 2020, 20:45 IST
Last Updated 20 ಜನವರಿ 2020, 20:45 IST
ಅತ್ಯಾಚಾರ ಆರೋಪಿ ಪವನ್ ಕುಮಾರ್ ಗುಪ್ತಾ
ಅತ್ಯಾಚಾರ ಆರೋಪಿ ಪವನ್ ಕುಮಾರ್ ಗುಪ್ತಾ    

ನವದೆಹಲಿ: ನಿರ್ಭಯಾ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಪವನ್ ಕುಮಾರ್ ಗುಪ್ತಾ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾ ಮಾಡಿತು.

ಗಲ್ಲುಶಿಕ್ಷೆ ವಿಧಿಸಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಪವನ್ ಅರ್ಜಿ ಸಲ್ಲಿಸಿದ್ದಾನೆ. ‘ಕೃತ್ಯ ನಡೆದ ವೇಳೆ ನಾನು ಬಾಲಕನಾಗಿದ್ದೆ’ ಎಂದು ಆತ ಅರ್ಜಿಯಲ್ಲಿ ಹೇಳಿದ್ದಾನೆ.

ನ್ಯಾಯಮೂರ್ತಿಗಳಾದ ಆರ್. ಭಾನುಮತಿ, ಅಶೋಕ್‌ ಭೂಷಣ್ ಹಾಗೂ ಎ.ಎಸ್‌. ಬೋಪಣ್ಣ ಅವರನ್ನೊಳಗೊಂಡ ಪೀಠ ಈ ಅರ್ಜಿಯನ್ನು ವಜಾ ಮಾಡಿದೆ. ದೆಹಲಿ ಹೈಕೋರ್ಟ್‌ ಆದೇಶವನ್ನು ಎತ್ತಿಹಿಡಿದಿದೆ.

ADVERTISEMENT

ಹೈಕೋರ್ಟ್ ಆದೇಶ ಸರಿಯಾಗಿಯೇ ಇದೆ ಎಂದು ನ್ಯಾಯಪೀಠ ಹೇಳಿತು.

ನಿರ್ಭಯಾ ಪ್ರಕರಣದ ತಪ್ಪಿತಸ್ಥರಿಗೆ ಫೆ.1ರಂದು ಗಲ್ಲು ಶಿಕ್ಷೆ ಜಾರಿ ಮಾಡಲು ದೆಹಲಿಯ ನ್ಯಾಯಾಲಯವೊಂದು ವಾರೆಂಟ್‌ ಹೊರಡಿಸಿದೆ. ಇದನ್ನು ಪವನ್‌ ಕುಮಾರ್‌ ಪ್ರಶ್ನಿಸಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.