ನವದೆಹಲಿ: ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡಗಳ (ಎಸ್ಸಿ/ಎಸ್ಟಿ) ಮೀಸಲಾತಿಯಲ್ಲಿ ಕೆನೆಪದರ ನಿಯಮವನ್ನು ಜಾರಿಗೊಳಿಸುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ಜಾರಿಗೊಳಿಸಿದೆ.
ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠವು ಈ ಅರ್ಜಿಯ ವಿಚಾರಣೆ ನಡೆಸಲು ಸಮ್ಮತಿಸಿದೆ. ಅರ್ಜಿಯ ದೂರದೃಷ್ಟಿಯ ಪರಿಣಾಮದಿಂದ ವಿರೋಧಗಳು ವ್ಯಕ್ತವಾಗಬಹುದಾಗಿದ್ದು, ಅವನ್ನು ಎದುರಿಸಲು ವಕೀಲರು ಸಿದ್ಧರಾಗಿರಬೇಕು ಎಂದೂ ಹೇಳಿದೆ.
ರಾಮಶಂಕರ್ ಪ್ರಜಾಪತಿ ಹಾಗೂ ಯಮುನಾ ಪ್ರಸಾದ್ ಎಂಬವರು ಈ ಅರ್ಜಿ ಸಲ್ಲಿಸಿದ್ದಾರೆ. ‘ದಶಕಗಳಿಂದ ಮೀಸಲಾತಿ ಸೌಲಭ್ಯಗಳಿದ್ದರೂ ಆರ್ಥಿಕವಾಗಿ ಹಿಂದುಳಿದ ಕೆಲವರ ಸ್ಥಿತಿ ಹಾಗೆಯೇ ಇದೆ. ಮೀಸಲಾತಿ ಸೌಲಭ್ಯಗಳನ್ನು ಆದಾಯ ಆಧರಿತವಾಗಿ ಪಡೆಯುವಂತೆ ಸಾಂವಿಧಾನಿಕ ಸುಧಾರಣೆಗಳನ್ನು ತಂದಲ್ಲಿ, ಅರ್ಹ ಸಮುದಾಯದ ಬಡವರಿಗೆ ಆದ್ಯತೆಯಲ್ಲಿ ಮೀಸಲಾತಿಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗಲಿದೆ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.