
ನವದೆಹಲಿ: ‘ಅರಾವಳಿಯನ್ನು ಮಟ್ಟಲು ಯಾರಿಗೂ ಅವಕಾಶ ಕೊಡುವುದಿಲ್ಲ. ವೈಜ್ಞಾನಿಕವಾದ ತಳಮಟ್ಟದ ವರದಿ ಆಧರಿಸಿ ಮಾತ್ರ ತಜ್ಞರ ಸಮಿತಿಯು ಯೋಜನೆಗಳನ್ನು ಪರಿಗಣಿಸಬಹುದು’ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಅರಾವಳಿಯು ಪೂರ್ಣ ಶ್ರೇಣಿಯನ್ನು ಹೊಂದಿದೆ. ಎಲ್ಲಾ ಅಂಶಗಳನ್ನು ಪರಿಗಣಿಸಿ, ಸಮಗ್ರ ದೃಷ್ಟಿಯನ್ನು ಪರಿಗಣಿಸಿಯೇ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾ.ಜಾಯ್‌ಮಾಲ್ಯ ಬಾಗ್ಚಿ, ನ್ಯಾ. ವಿಪುಲ್ ಎಂ. ಪಂಚೋಲಿ ಅವರಿದ್ದ ಪೀಠವು, 1995 ಬಾಕಿ ಇರುವ ‘ಇನ್ ರೆ– ಟಿಎ.ನ್. ಗೋದವರ್ಮನ್ ಥಿರುಮುಲ್ಪಡ್’ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮಧ್ಯಂತರ ವಿಚಾರಣೆಯಲ್ಲಿ ಈ ವಿಷಯ ಸ್ಪಷ್ಟಪಡಿಸಿದ್ದಾರೆ.
ಅರಾವಳಿಯು ಮೃಗಾಲಯದ ಸಫಾರಿಗೆ ಸಂಬಂಧಿಸಿದ ಯೋಜನೆಯಾಗಿದೆ.
ಸಫಾರಿ ಯೋಜನೆಯನ್ನು 3,300 ಎಕರೆಗೆ ಸೀಮಿತಗೊಳಿಸಲಾಗಿದೆ. ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು ಇನ್ನಷ್ಟೇ ಪರಿಶೀಲಿಸಬೇಕಾಗಿದೆ ಎಂದು ಹರಿಯಾಣದ ಪರ ವಕೀಲರು ನ್ಯಾಯಾಲಯದ ಗಮನಸೆಳೆದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ‘ನಾವು ನಿಮಗೆ ಇಂದಿನಿಂದ ಒಂದು ಇಂಚಿಗೂ ಅವಕಾಶ ನೀಡುವುದಿಲ್ಲ’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.