
ಸುಪ್ರೀಂ ಕೋರ್ಟ್
ನವದೆಹಲಿ: ಉಪ ರಾಷ್ಟ್ರಪತಿಯು, ರಾಷ್ಟ್ರಪತಿಯ ಅನುಪಸ್ಥಿತಿಯಲ್ಲಿ ಅವರ ಕೆಲಸವನ್ನು ನಿರ್ವಹಿಸಬಹುದಾದರೆ, ರಾಜ್ಯಸಭೆಯ ಉಪಸಭಾಪತಿಯು, ಸಭಾಪತಿಯ ಅನುಪಸ್ಥಿತಿಯಲ್ಲಿ ಅವರ ಕೆಲಸವನ್ನು ನಿರ್ವಹಿಸಬಾರದೇಕೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ದೀಪಾಂಕರ್ ದತ್ತಾ, ಎಸ್.ಸಿ ಶರ್ಮಾ ನೇತೃತ್ವದ ನ್ಯಾಯಪೀಠ ಈ ಪ್ರಶ್ನೆ ಎತ್ತಿದೆ.
1968 ನ್ಯಾಯಾಧೀಶರ (ವಿಚಾರಣಾ) ಕಾಯ್ದೆಯಡಿ ರಾಜ್ಯಸಭೆಯ ಉಪ ಸಭಾಪತಿಗೆ ನಿಲುವಳಿ ತಿರಸ್ಕರಿಸುವ ಅಧಿಕಾರ ಇಲ್ಲ, ಕೇವಲ ಸ್ಫೀಕರ್ ಮತ್ತು ಸಭಾಪತಿಗೆ ಮಾತ್ರ ನಿಲುವಳಿ ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಇದೆ ಎಂಬ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ಪರವಾಗಿ ಮಾಡಿದ ಸಲ್ಲಿಕೆಯನ್ನು ಒಪ್ಪಿಕೊಳ್ಳಲು ಕೋರ್ಟ್ ನಿರಾಕರಿಸಿತು.
ಯಶವಂತ್ ವರ್ಮಾ ಅವರ ನವದೆಹಲಿಯಲ್ಲಿನ ಅಧಿಕೃತ ನಿವಾಸದಲ್ಲಿ ಮಾರ್ಚ್ 14ರಂದು ಸುಟ್ಟ ನೋಟಿನ ಚೂರುಗಳು ಪತ್ತೆಯಾಗಿದ್ದವು. ಅದರ ಬೆನ್ನಲ್ಲೇ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ಬದಲಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.