ADVERTISEMENT

ರೇರಾದಿಂದ ಬಿಲ್ಡರ್‌ಗಳಿಗೆ ಮಾತ್ರ ಲಾಭ: ಸುಪ್ರೀಂ ಕೋರ್ಟ್ ಕಿಡಿ

ಪಿಟಿಐ
Published 13 ಫೆಬ್ರುವರಿ 2026, 16:02 IST
Last Updated 13 ಫೆಬ್ರುವರಿ 2026, 16:02 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ‘ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ(ರೇರಾ)ವು ಬಿಲ್ಡರ್‌ಗಳಿಗೆ ಅನುಕೂಲ  ಮಾಡಿಕೊಡುತ್ತಿದೆಯೇ ಸಂಸ್ಥೆಯಿಂದ ಏನೂ ಉಪಯೋಗವಿಲ್ಲ; ಎಲ್ಲ ರಾಜ್ಯಗಳು ರೇರಾದ ಸಂವಿಧಾನವನ್ನು ಮರುಪರಿಶೀಲಿಸುವ ಅಗತ್ಯವಿದೆ’ ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ.

‘ರೇರಾ ಸಂಸ್ಥೆಯ ಕುರಿತು ಸಂಪೂರ್ಣವಾಗಿ ಅಸಹ್ಯಗೊಂಡಿದ್ದು, ನಿರಾಸೆಗೊಳಗಾಗಿದ್ದೇನೆ. ಸಂಸ್ಥೆಯನ್ನು ರದ್ದುಗೊಳಿಸಿದರೂ ಪರವಾಗಿಲ್ಲ’ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾ.ಜಾಯ್‌ಮಾಲ್ಯ ಬಾಗ್ಚಿ ನ್ಯಾಯಪೀಠ ಪ್ರತಿಪಾದಿಸಿತು.

ರೇರಾ ಕಚೇರಿಯನ್ನು ಶಿಮ್ಲಾದಿಂದ ಧರ್ಮಶಾಲಾಕ್ಕೆ ಸ್ಥಳಾಂತರಿಸಲು ಅನುವು ಮಾಡಿಕೊಟ್ಟ ಹಿಮಾಚಲಪ್ರದೇಶ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಹಿಮಾಚಲಪ್ರದೇಶ ಸರ್ಕಾರ ಹಾಗೂ ಇತರರು ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಈ ಅಭಿ‍ಪ್ರಾಯಪಟ್ಟಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.