ADVERTISEMENT

ಸೂರತ್‌: ಮೂವರನ್ನು ಬಲಿಪಡೆದ ಗಾಳಿಪಟದ ದಾರ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 18:48 IST
Last Updated 15 ಜನವರಿ 2026, 18:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸೂರತ್‌: ಗಾಳಿಪಟದ ಸೂತ್ರವು ದಿಢೀರನೆ ಕಂಡಿದ್ದರಿಂದ ಆತಂಕಗೊಂಡು ಬೈಕ್‌ಗೆ ಹಠಾತ್ ಬ್ರೇಕ್‌ ಹಾಕಿದ್ದರಿಂದ ಅಪಘಾತ ಉಂಟಾಗಿ, ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಸೂರತ್‌ನ ಅದಾಜನ್‌ ಪ್ರದೇಶದಲ್ಲಿ ಗುರುವಾರ ಈ ಘಟನೆ ನಡೆದಿದೆ. 

ಪಶ್ಚಿಮ ಬಂಗಾಳದ ಶೇಖ್‌, ಸೂರತ್‌ನ ಚಿನ್ನಾಭರಣ ಮಳಿಗೆಯಲ್ಲಿ ಕಾರ್ಮಿಕರಾಗಿದ್ದರು. ಮಕರ ಸಂಕಾಂತ್ರಿ ಹಬ್ಬದ ಅಂಗವಾಗಿ ಪತ್ನಿ ಮತ್ತು 10 ವರ್ಷದ ಪುತ್ರಿಯೊಂದಿಗೆ ಸ್ಕೂಟರ್‌ನಲ್ಲಿ ರಜೆಯ ವಿಹಾರಕ್ಕಾಗಿ ಹೊರಟಿದ್ದರು. ಇಲ್ಲಿನ 40 ಅಡಿ ಎತ್ತರದ ಚಂದ್ರಶೇಖರ್‌ ಆಜಾದ್‌ ಮೇಲುಸೇತುವೆ ಮೇಲೆ ಸಾಗುವಾಗ ಅವಘಡ ಸಂಭವಿಸಿದೆ. 

ಗಾಳಿಪಟದ ದಾರ ಕುತ್ತಿಗೆಗೆ ಸುತ್ತಿಕೊಳ್ಳುವುದನ್ನು ತಪ್ಪಿಸಲು ಸವಾರ ರೆಹಾನ್‌ ಶೇಖ್‌ (35) ತಕ್ಷಣ ಬ್ರೇಕ್‌ ಹಾಕಿದ್ದಾರೆ. ನಿಯಂತ್ರಣ ತಪ್ಪಿದ ಸ್ಕೂಟರ್‌ ಸಮೀಪದ ಗೋಡೆಗೆ ಅಪ್ಪಳಿಸಿ ಉರುಳಿದೆ. ಪತ್ನಿ ಮತ್ತು ಪುತ್ರಿ  ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಳೊಂದಿಗೆ ಆಸ್ಪತ್ರೆಯಲ್ಲಿದ್ದ ಶೇಖ್‌ ಗುರುವಾರ ಮೃತಪಟ್ಟಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.