ADVERTISEMENT

ಸುರೇಂದ್ರ ಗಾಡಲಿಂಗ್‌ ಜಾಮೀನು ಅರ್ಜಿ ವಿಚಾರಣೆ ಸೆ.3ಕ್ಕೆ

ಪಿಟಿಐ
Published 29 ಆಗಸ್ಟ್ 2025, 14:16 IST
Last Updated 29 ಆಗಸ್ಟ್ 2025, 14:16 IST
   

ನವದೆಹಲಿ: ಎಲ್ಗಾರ್‌ ಪರಿಷತ್‌–ನಕ್ಸಲ್‌ ಸಂಬಂಧದ ಪ್ರಕರಣದಲ್ಲಿ ಬಂಧಿನದಲ್ಲಿ ಇರುವ ವಕೀಲ ಸುರೇಂದ್ರ ಗಾಡಲಿಂಗ್‌ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್‌ 3ರಂದು ನಡೆಸುವುದಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ಒಪ್ಪಿಗೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್‌. ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಎನ್‌.ವಿ. ಅಂಜಾರಿಯಾ ಮತ್ತು ಅಲೋಕ್‌ ಆರಾಧೆ ಅವರ ಪೀಠವು ವಿಚಾರಣೆ ಕೈಗೆತ್ತಿಕೊಳ್ಳಲು ಒಪ್ಪಿಗೆ ನೀಡಿತು. ನ್ಯಾಯಮೂರ್ತಿ ಎಂ.ಎಂ. ಸುಂದರೇಶ್‌ ಅವರು ಈ ಅರ್ಜಿಯ ವಿಚಾರಣೆಯಿಂದ ಆ.26ರಂದು ಹಿಂದೆ ಸರಿದಿದ್ದರು.

‘ಈ ಪ್ರಕರಣ ಸಂಬಂಧ ಸುರೇಂದ್ರ ಗಾಡಲಿಂಗ್‌ ಅವರು ಆರು ವರ್ಷದಿಂದ ಜೈಲುವಾಸ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ಅರ್ಜಿಯ ವಿಚಾರಣೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕು’ ಎಂದು ಸುರೇಂದ್ರ ಅವರ ವಕೀಲರು ಆ.8ರಂದು ಸಿಜೆಐ ಗಮನಕ್ಕೆ ತಂದಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.