ADVERTISEMENT

ಡ್ರಗ್‌ ಡೀಲರ್‌ ಜೊತೆ ಎರಡು ವರ್ಷದಿಂದ ಸಂಪರ್ಕದಲ್ಲಿದ್ದ ರಿಯಾ ಸಹೋದರ: ಎನ್‌ಸಿಬಿ

ಏಜೆನ್ಸೀಸ್
Published 4 ಸೆಪ್ಟೆಂಬರ್ 2020, 7:33 IST
Last Updated 4 ಸೆಪ್ಟೆಂಬರ್ 2020, 7:33 IST
ಸುಶಾಂತ್ ಸಿಂಗ್ ರಜಪೂತ್
ಸುಶಾಂತ್ ಸಿಂಗ್ ರಜಪೂತ್   

ನವದೆಹಲಿ: ಸುಶಾಂತ್ ಸಿಂಗ್ ರಜಪೂತ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿರುವ ಮಾದಕವಸ್ತು ನಿಯಂತ್ರಣದಳ (ಎನ್‌ಸಿಬಿ)ರಿಯಾ ಚಕ್ರವರ್ತಿ ಸಹೋದರ ಶೋವಿಕ್‌ ಚಕ್ರವರ್ತಿ ಅವರು ಡ್ರಗ್‌ ಡೀಲರ್‌ ಬಾಸಿತ್‌ ಪರಿಹಾರ್‌ ಜೊತೆ ಸಂಪರ್ಕದಲ್ಲಿದ್ದರು ಎಂದು ತಿಳಿಸಿರುವುದಾಗಿ ವರದಿಯಾಗಿದೆ.

ಶೋವಿಕ್‌ ಕಳೆದ ಎರಡು ವರ್ಷಗಳಿಂದ ಬಾಸಿತ್‌ ಜೊತೆ ಸಂಪರ್ಕದಲ್ಲಿದ್ದರು. ನಿಜ ಏನೆಂದರೆ, ಬಾಸಿತ್‌ ಕೂಡ ಶೋವಿಕ್‌ ಅವರ ನಿವಾಸಕ್ಕೆ ಸಾಕಷ್ಟು ಸಲ ಭೇಟಿ ನೀಡಿದ್ದ. ಶೋವಿಕ್‌ ಫುಟ್‌ಬಾಲ್‌ ಆಡುತ್ತಿದ್ದ ಕ್ಲಬ್‌ಗೆ ಬಾಸಿತ್‌ ಆಗಾಗ್ಗೆ ಭೇಟಿ ನೀಡುತ್ತಿದ್ದ. ಇಬ್ಬರೂ ಒಟ್ಟಿಗೆ ಅಭ್ಯಾಸ ಮಾಡಲಾರಂಭಿಸಿದ್ದರು. ಬಳಿಕ ಸ್ನೇಹಿತರಾಗಿದ್ದರು.

ಅದಾದ ನಂತರ ಡ್ರಗ್‌ ವ್ಯವಹಾರಕ್ಕೆ ಸಂಬಂಧಿಸಿದ ಸಂಭಾಷಣೆಗಳು ಆರಂಭವಾಗಿದ್ದವು. ಮಾತುಕತೆ ಬಳಿಕ ಕೂಡಲೇ ರಿಯಾ ಸಹೋದರನಿಗೆ ಬಾಸಿತ್ ಮಾದಕವಸ್ತು‌ ಪೂರೈಸಲಾರಂಭಿಸಿದ್ದ. ಶೋವಿಕ್ ಜೊತೆಗಿನ ನಿಕಟ ಸಂಬಂಧದ ಬಗ್ಗೆ ಬಾಸಿತ್‌ ವಿಚಾರಣೆ ವೇಳೆ ಒಪ್ಪಿಕೊಂಡಿದ್ದ ಎನ್ನಲಾಗಿದೆ.

ADVERTISEMENT

ಶೋವಿಕ್‌ ಜೊತೆ ಸಂಪರ್ಕದಲ್ಲಿದ್ದ ಸಂಪರ್ಕದಲ್ಲಿದ್ದಡ್ರಗ್‌ ಡೀಲರ್‌ ಕೈಜಾನ್‌ ಇಬ್ರಾಹಿಂ ಎಂಬಾತನನ್ನು ಎನ್‌ಸಿಬಿ ಗುರುವಾರ ವಶಕ್ಕೆ ವಶಕ್ಕೆ ಪಡೆದಿತ್ತು. ಬಾಂದ್ರಾದಲ್ಲಿನ ಇಂಪ್ರೆಷನ್ ಬಾರ್‌ನೊಂದಿಗೆ ಸಂಪರ್ಕದಲ್ಲಿರುವ ಕೈಜಾನ್‌ ಇತರ ಐವರು ಪಾಲುದಾರರನ್ನು ಹೊಂದಿದ್ದಾರೆ.

ಗೋವಾ ಮೂಲಕ ಹೋಟೆಲ್‌ ಉದ್ಯಮಿ ಗೌರವ್‌ ಆರ್ಯಾ ಅವರನ್ನೂ ಎನ್‌ಸಿಬಿ ವಿಚಾರಣೆಗೊಳಪಡಿಸಲಿದೆ. ಆಗಸ್ಟ್‌ 31ರಂದು ಜಾರಿ ನಿರ್ದೇಶನಾಲಯದ ವಿಚಾರಣೆಗೆ ಒಳಪಟಿದ್ದ ಗೌರವ್‌, ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನೂ ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.