ADVERTISEMENT

ಡ್ರಗ್ ಡೀಲ್: ಬಂಧಿತ ಸಾವಂತ್‌ ಸೆ.9ರವರೆಗೆ ಎನ್‌ಸಿಬಿ ಕಸ್ಟಡಿಗೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 10:25 IST
Last Updated 6 ಸೆಪ್ಟೆಂಬರ್ 2020, 10:25 IST
ದಿವಂಗತ ನಟ ಸುಶಾಂತ್ ಸಿಂಗ್ ಆಪ್ತ ಸಿಬ್ಬಂದಿ ದೀಪೇಶ್ ಸಾವಂತ್(ಹಸಿರು ಬಟ್ಟೆ ತೊಟ್ಟವನು)ನನ್ನು ಎನ್‌ಸಿಬಿ ಅಧಿಕಾರಿಗಳು ಭಾನುವಾರ ಮುಂಬೈ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿರುವ ದೃಶ್ಯ
ದಿವಂಗತ ನಟ ಸುಶಾಂತ್ ಸಿಂಗ್ ಆಪ್ತ ಸಿಬ್ಬಂದಿ ದೀಪೇಶ್ ಸಾವಂತ್(ಹಸಿರು ಬಟ್ಟೆ ತೊಟ್ಟವನು)ನನ್ನು ಎನ್‌ಸಿಬಿ ಅಧಿಕಾರಿಗಳು ಭಾನುವಾರ ಮುಂಬೈ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿರುವ ದೃಶ್ಯ   

ಮುಂಬೈ: ಬಾಲಿವುಡ್‌ ಡ್ರಂಗ್ಸ್‌ ದಂಧೆ ಪ್ರಕರಣದಲ್ಲಿ ಬಂಧಿಸಲಾಗಿರುವ ನಟ ಸುಶಾಂತ್ ಸಿಂಗ್ ಆಪ್ತ ಸಿಬ್ಬಂದಿ ದೀಪೇಶ್ ಸಾವಂತ್‌ನನ್ನು ಮುಂಬೈ ನ್ಯಾಯಾಲಯ ಸೆಪ್ಟೆಂಬರ್ 9ರವರೆಗೆ ಎನ್‌ಸಿಬಿ ಕಸ್ಟಡಿಗೆ ನೀಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪೇಶ್ ಸಾವಂತ್‌ನನ್ನು ಶನಿವಾರ ಮಾದಕವಸ್ತು ನಿಯಂತ್ರಣ ದಳದ ಅಧಿಕಾರಿಗಳು (ಎನ್‌ಸಿಬಿ)ಶನಿವಾರ ಬಂಧಿಸಿದ್ದರು. ಭಾನುವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಸಾವಂತ್‌ನನ್ನು ಎನ್‌ಸಿಬಿ ಕಸ್ಟಡಿಗೆ ನೀಡಿತು.

ಎನ್‌ಸಿಪಿ ಮಾಹಿತಿ ಪ್ರಕಾರ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಿಯಾ ಚಕ್ರವರ್ತಿ ಸಹೋದರ ಶೌವಿಕ್ ಚಕ್ರವರ್ತಿ, ಸುಶಾಂತ್ ಸಿಂಗ್ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಂಡ, ಸಾವಂತ್ ಮತ್ತು ಡ್ರಗ್ ಡೀಲರ್ ಜಯಿದಾ ವಿಲಾತ್ರ ಸೇರಿ ಏಳು ಮಂದಿಯನ್ನು ಬಂಧಿಸಿದೆ. ತನಿಖೆ ಮುಂದುವರಿದಿದೆ.

ADVERTISEMENT

ಮಾದಕವಸ್ತುಗಳ ಸಂಗ್ರಹಣೆ, ಬಳಕೆ ಮತ್ತು ಸಾಗಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ದೀಪೇಶ್‌ ಸಾವಂತ್‌ ಎಂಬಾತನ ಪಾತ್ರವಿದೆ ಎಂಬ ಆರೋಪ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ವಿಚಾರಣೆಗೆ ಒಳಪಡಿಸಿದ್ದ ಎನ್‌ಸಿಬಿಯು ದೀಪೇಶ್‌ನ ಹೇಳಿಕೆ ಮತ್ತು ಡಿಜಿಟಲ್‌ ಸಾಕ್ಷ್ಯಗಳ ಆಧಾರದ ಮೇಲೆ ಆತನನ್ನು ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.