ADVERTISEMENT

ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಜ.31ರವರೆಗೆ ರದ್ದು

ಪಿಟಿಐ
Published 30 ಡಿಸೆಂಬರ್ 2020, 11:21 IST
Last Updated 30 ಡಿಸೆಂಬರ್ 2020, 11:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ನಿಗದಿಯಾದ ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಹಾರಾಟಕ್ಕೆ ಕೋವಿಡ್‌–19 ಕಾರಣದಿಂದಾಗಿ ನಿರ್ಬಂಧ ಹೇರಿರುವುದನ್ನು ಜ.31ರವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು(ಡಿಜಿಸಿಎ) ಬುಧವಾರ ತಿಳಿಸಿದೆ.

‘ಒಪ್ಪಿಗೆ ನೀಡಿರುವ ಆಯ್ದ ಮಾರ್ಗಗಳಲ್ಲಿ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಮುಂದುವರಿಯಲಿದೆ’ ಎಂದು ಡಿಜಿಸಿಎ ತಿಳಿಸಿದೆ.

ಪಿಡುಗಿನ ಕಾರಣದಿಂದಾಗಿ ಮಾ.23ರಿಂದ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ರದ್ದುಗೊಂಡಿತ್ತು. ಮೇ ತಿಂಗಳಲ್ಲಿ ವಂದೇ ಭಾರತ್‌ ಮಿಷನ್‌ನಡಿ ವಿದೇಶಗಳಿಗೆ ವಿಶೇಷ ವಿಮಾನಗಳನ್ನು ಕಾರ್ಯಾಚರಣೆಗೊಳಿಸಲಾಗಿತ್ತು. ನಂತರದಲ್ಲಿ ಅಮೆರಿಕ, ಯುಎಇ, ಫ್ರಾನ್ಸ್‌ ಸೇರಿದಂತೆ 24 ರಾಷ್ಟ್ರಗಳ ಜೊತೆ ‘ಏರ್‌ ಬಬಲ್‌’ ಒಪ್ಪಂದವನ್ನು ಭಾರತ ಮಾಡಿಕೊಂಡಿತ್ತು. ಈ ಒಪ್ಪಂದದಡಿ ರಾಷ್ಟ್ರಗಳ ನಡುವೆ ವಿಶೇಷ ಅಂತರರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.