ADVERTISEMENT

ಪಶ್ಚಿಮ ಬಂಗಾಳ | ಸುವೇಂದು ಅಧಿಕಾರಿ ಕಾರಿನ ಮೇಲೆ ದಾಳಿ: ಆರೋಪ

ಪಿಟಿಐ
Published 19 ಅಕ್ಟೋಬರ್ 2025, 11:10 IST
Last Updated 19 ಅಕ್ಟೋಬರ್ 2025, 11:10 IST
<div class="paragraphs"><p>(ಚಿತ್ರ ಕೃಪೆ: ಎಕ್ಸ್: ಸುವೇಂದು ಅಧಿಕಾರಿ)</p></div>

(ಚಿತ್ರ ಕೃಪೆ: ಎಕ್ಸ್: ಸುವೇಂದು ಅಧಿಕಾರಿ)

   

ಕೋಲ್ಕತ್ತ: 'ಕಾಳಿ ಪೂಜೆ ಹಾಗೂ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಲು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಸಂಚರಿಸುತ್ತಿದ್ದಾಗ ನನ್ನ ಕಾರಿನ ಮೇಲೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ದಾಳಿ ನಡೆಸಿದ್ದಾರೆ' ಎಂದು ವಿರೋಧ ಪಕ್ಷದ ನಾಯಕ, ಬಿಜೆಪಿಯ ಸುವೇಂದು ಅಧಿಕಾರಿ ಇಂದು (ಭಾನುವಾರ) ಆರೋಪಿಸಿದ್ದಾರೆ.

'ಕನಿಷ್ಠ ಏಳು ಕಡೆಗಳಲ್ಲಿ ಕಾರನ್ನು ತಡೆಯಲು ಯತ್ನಿಸಲಾಯಿತು. ಲಾಲ್‌ಪುರ ಮದರಸಾದ ಎದುರು ದಾಳಿ ನಡೆದಿದೆ' ಎಂದು ಅವರು ಆರೋಪಿಸಿದ್ದಾರೆ.

ADVERTISEMENT

ಈ ಸಂಬಂಧ ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ವಿಡಿಯೊ ಪೋಸ್ಟ್ ಮಾಡಿರುವ ಸುವೇಂದು, 'ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಬಾಂಗ್ಲಾದೇಶದ ಅಕ್ರಮ ಮುಸ್ಲಿಂ ವಲಸಿಗರು ನನ್ನ ಕಾರಿನ ಮೇಲೆ ಹಲವು ಬಾರಿ ದಾಳಿ ನಡೆಸಿದ್ದಾರೆ. ಟಿಎಂಸಿ ಸ್ಥಳೀಯ ನಾಯಕರ ಬೆಂಬಲದೊಂದಿಗೆ ದಾಳಿ ನಡೆಸಲಾಗಿದೆ. ನಾನು ರಾಜಕೀಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುತ್ತಿಲ್ಲ. ಬದಲಾಗಿ ಓರ್ವ ಹಿಂದೂ ಆಗಿ ಕಾಳಿ ಪೂಜೆ ಹಾಗೂ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಲು ಹೊರಟಿದ್ದೆ' ಎಂದು ಹೇಳಿದ್ದಾರೆ.

ಆದರೆ ಸುವೇಂದು ಅಧಿಕಾರಿ ಆರೋಪವನ್ನು ಟಿಎಂಸಿ ನಿರಾಕರಿಸಿದ್ದು, ಬಿಜೆಪಿಯ ಮೇಲೆ ಆಕ್ರೋಶಗೊಂಡಿರುವ ಜನರು ಪ್ರತಿಭಟನೆ ನಡೆಸಿದ್ದಾರೆ ಎಂದು ಪಕ್ಷದ ವಕ್ತಾರ ಜಯ ಪ್ರಕಾಶ್ ಮಜುಂದಾರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.