ಲಖನೌ: ಉತ್ತರ ಪ್ರದೇಶದ ಪಂಚಾಯತ್‌ರಾಜ್ ಇಲಾಖೆಯ ಹಿರಿಯ ಅಧಿಕಾರಿ ಸ್ವಾತಿ ಗುಪ್ತಾ ಅವರನ್ನು ಯಾರಾದರೂ ಭೇಟಿಯಾಗಬೇಕಾದರೆ ಅವರ ಫೇಸ್‌ಬುಕ್ ಪೇಜ್‌ನ ಅಗ್ರ ಅಭಿಮಾನಿ ಆಗಿರಬೇಕು. ಅವರ ಪೋಸ್ಟ್‌ಗಳನ್ನು 30 ದಿನಗಳವರೆಗೆ ಪ್ರತಿದಿನ ಹಂಚಿಕೊಳ್ಳಬೇಕು
ಹೌದು, ಈ ವಿಷಯವನ್ನು ಅವರೇ ಬಹಿರಂಗಪಡಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 2.5 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿರುವ ಸ್ವಾತಿ ಅವರು ಭಾನುವಾರ ಬೆಳಿಗ್ಗೆ ಫೇಸ್‌ಬುಕ್ ಲೈವ್‌ನಲ್ಲಿ ತನ್ನ ಫಾಲೋವರ್‌ಗಳೊಂದಿಗೆ ಸಂವಾದ ನಡೆಸಿದ್ದರು. ಆಗ, ‘ನಿಮ್ಮನ್ನು ಹೇಗೆ ಭೇಟಿಯಾಗುವುದು’ ಎಂದು ಅಭಿಮಾನಿಯೊಬ್ಬರು ಕೇಳಿದ್ದಕ್ಕೆ ಈ ಷರತ್ತು ವಿಧಿಸಿದ್ದಾರೆ.
ಅಲ್ಲದೆ, ಹಿಂಬಾಲಕರೊಂದಿಗಿನ ಭೇಟಿಯ ವಿವರಗಳನ್ನು ತನ್ನ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಹಂಚಿಕೊಳ್ಳುವುದಾಗಿಯೂ ತಿಳಿಸಿದ್ದಾರೆ.
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ‘ಇದು ವೃತ್ತಿಯ ನೈತಿಕತೆಗೆ ವಿರುದ್ಧವಾದದ್ದು’ ಎಂದು ಕೆಲ ನೆಟ್ಟಿಗರು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.