ADVERTISEMENT

ಸ್ವಿಗ್ಗಿ: ಮುಸ್ಲಿಂ ವ್ಯಕ್ತಿ ತಂದ ಆಹಾರ ಸ್ವೀಕರಿಸದ ಗ್ರಾಹಕ

ಪಿಟಿಐ
Published 25 ಅಕ್ಟೋಬರ್ 2019, 3:48 IST
Last Updated 25 ಅಕ್ಟೋಬರ್ 2019, 3:48 IST
   

ಹೈದರಾಬಾದ್:ಆಹಾರ ವಿತರಣಾ ಸಂಸ್ಥೆಯಾದ ಸ್ವಿಗ್ಗಿಯ ಡೆಲಿವರಿ ಹುಡುಗ ಮುಸ್ಲಿಂ ಆಗಿದ್ದರಿಂದ ಆಹಾರ ಪೊಟ್ಟಣವನ್ನು ಸ್ವೀಕರಿಸಲು ನಿರಾಕರಿಸಿದ ಆರೋಪದ ಮೇಲೆ ಗ್ರಾಹಕರೊಬ್ಬರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

‘ಡೆಲಿವರಿ ಹುಡುಗ ಮುಸ್ಲಿಂ ಆಗಿದ್ದರಿಂದ ಮನೆಯವರೆಗೆ ಕೊಂಡೊಯ್ದಿದ್ದ ಆಹಾರ ಪೊಟ್ಟಣವನ್ನು ಗ್ರಾಹಕರು ಸ್ವೀಕರಿಸಿಲ್ಲ ಎಂದು ಸ್ವಿಗ್ಗಿ ಸಂಸ್ಥೆಯ ಅಧಿಕಾರಿ ಮುದಸ್ಸಿರ್‌ ಸುಲೇಮಾನ್‌ ಬುಧವಾರ ದೂರು ನೀಡಿದ್ದಾರೆ. ಸದ್ಯದಲ್ಲಿಯೇ ಎಫ್‌ಐಆರ್‌ ದಾಖಲಿಸಲಾಗುವುದು’ ಎಂದು ಪೊಲೀಸ್‌ ಇನ್‌ಸ್ಪೆಕ್ಟರ್‌ ಪಿ.ಶ್ರೀನಿವಾಸ್‌ ತಿಳಿಸಿದ್ದಾರೆ.

ಆಹಾರ ನಿರಾಕರಿಸಿದನ್ನು ಮುಸ್ಲಿಂ ಸಂಘಟನೆಯಾದ ಮಜ್ಲಿಸ್ ಬಕಾವೊ ತೆಹ್ರೀಕ್ ಅಧ್ಯಕ್ಷ ಅಮ್ಜದ್‌ ಉಲ್ಲಾ ಖಾನ್ ಅವರ ಗಮನಕ್ಕೆ ಡೆಲಿವರಿ ಬಾಯ್‌ ತಂದಿದ್ದಾನೆ. ಖಾನ್‌ ಅವರು ಈ ಮಾಹಿತಿಯನ್ನು ಟ್ವಿಟ್ಟರ್‌ ಮೂಲಕ ಹರಿಬಿಟ್ಟಿದ್ದಾರೆ.

ADVERTISEMENT

‘ಗ್ರಾಹಕರು ಮುಸ್ಲಿಂ ರೆಸ್ಟೋರಂಟ್‌ನಿಂದ ಚಿಕನ್‌–65 ಆಹಾರ ಆರ್ಡರ್‌ ಮಾಡಿದ್ದರು. ಆ ಪೊಟ್ಟಣವನ್ನು ವಿತರಿಸಲು ಈ ಹುಡುಗ ಹೋಗಿದ್ದ’ ಎಂದು ಖಾನ್‌ ಹೇಳಿದ್ದಾರೆ.

‘ಡೆಲಿವರಿ ಬಾಯ್‌ ಹಿಂದೂ ಆಗಿರದ ಕಾರಣ ಆಹಾರ ಸ್ವೀಕರಿಸಿಲ್ಲ. ಆದರೆ, ನಾವು ಜಾತಿ– ಧರ್ಮದ ನಡುವೆ ಯಾವುದೇ ತಾರತಮ್ಯ ಮಾಡುವುದಿಲ್ಲ. ಆಹಾರಕ್ಕೆ ಆರ್ಡ್‌ರ್‌ ಬಂದ ತಕ್ಷಣವೇ ಆ ಪ್ರದೇಶದಲ್ಲಿರುವ ನಮ್ಮ ಡೆಲಿವರಿ ಹುಡುಗರ ಮೂಲಕ ಆಹಾರ ಪೊಟ್ಟಣ ಕಳುಹಿಸುತ್ತೇವೆ’ ಎಂದು ಸ್ವಿಗ್ಗಿ ಹೇಳಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.