ADVERTISEMENT

ಪ್ರಸಿದ್ಧ 'ಅಮುಲ್‌ ಗರ್ಲ್' ಸೃಷ್ಟಿಕರ್ತ ಸಿಲ್ವೆಸ್ಟರ್‌ ಡ ಕುನ್ಹಾ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜೂನ್ 2023, 6:41 IST
Last Updated 22 ಜೂನ್ 2023, 6:41 IST
   

ವಡೋದರಾ: ಖ್ಯಾತ ಜಾಹೀರಾತು ಉದ್ಯಮಿ, ಪ್ರಸಿದ್ಧ ಅಮುಲ್‌ ಗರ್ಲ್ ಚಿತ್ರದ ನಿರ್ಮಾತೃ ಸಿಲ್ವೆಸ್ಟರ್‌ ಡ ಕುನ್ಹಾ ಅವರು ಮಂಗಳವಾರ ರಾತ್ರಿ ಮುಂಬೈನಲ್ಲಿ ನಿಧನರಾಗಿದ್ದಾರೆ.

ಅವರು ನಿರ್ಮಿಸಿದ ಅಮುಲ್ ಗರ್ಲ್ ಚಿತ್ರ ಹಾಗೂ ‘ಅಟ್ಟರ್ಲಿ ಬಟ್ಟರ್ಲಿ ಡಿಲೀಷಿಯಸ್‘ ಎನ್ನುವ ಅಡಿಬರಹ ಭಾರಿ ಪ್ರಸಿದ್ಧಿ ಪಡೆದಿದೆ.

60ರ ದಶಕದಲ್ಲಿ ಅವರು ರಚಿಸಿದ್ದ ಅಮುಲ್‌ ಗರ್ಲ್ ಕ್ಯಾರಿಕೇಚರ್, ದೇಶದ ಡೈರಿ ಉದ್ಯಮದ ಗುರುತಾಗಿ ಮಾರ್ಪಟ್ಟಿದೆ.

ADVERTISEMENT

ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ಭಾರತದ ಶ್ವೇತ ಕ್ರಾಂತಿಯ ಪಿತಾಮಹ ಡಾ. ವರ್ಗೀಸ್‌ ಕುರಿಯನ್‌ ಅವರ ಜತೆ ಸಿಲ್ವೆಸ್ಟರ್ ಅವರು ಕೆಲಸ ಮಾಡಿದ್ದರು.

‘ಸಿಲ್ವೆಸ್ಟರ್‌ ಅವರ ಸಾವು ಅಮುಲ್ ಗರ್ಲ್‌ಗೆ ದೊಡ್ಡ ನಷ್ಟ ಉಂಟು ಮಾಡಿದೆ. ಕೇವಲ ಅಮುಲ್‌ಗೆ ಮಾತ್ರವಲ್ಲ ಇಡೀ ಜಾಹೀರಾತು ಉದ್ಯಮಕ್ಕೆ ಅವರ ಕೊಡುಗೆ ದೊಡ್ಡದು’ ಎಂದು ಗುಜರಾತ್‌ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟದ ನಿರ್ದೇಶಕ ಜಯೆನ್‌ ಮೆಹ್ತಾ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.