ADVERTISEMENT

ತಬ್ಲೀಗಿ ಜಮಾತ್‌ನ 630 ವಿದೇಶಿ ಸದಸ್ಯರು ಭಾರತ ಬಿಟ್ಟು ಹೋಗಿದ್ದಾರೆ: ಎಂಇಎ

ಪಿಟಿಐ
Published 28 ಆಗಸ್ಟ್ 2020, 2:10 IST
Last Updated 28 ಆಗಸ್ಟ್ 2020, 2:10 IST
ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ
ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ   

ನವದೆಹಲಿ: ಸರಿಸುಮಾರು 1095 ಲುಕ್‍ಔಟ್ ಸುತ್ತೋಲೆಗಳನ್ನು ಡಿಲೀಟ್ ಮಾಡಲಾಗಿದೆಮತ್ತು ತಬ್ಲೀಗಿ ಜಮಾತ್‌ನ 630 ವಿದೇಶಿ ಸದಸ್ಯರು ಭಾರತ ಬಿಟ್ಟು ಹೋಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ತಬ್ಲೀಗಿ ಜಮಾತ್‌ನ ವಿದೇಶಿ ಸದಸ್ಯರು ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಲ್ಲದೆ ಲಾಕ್‍ಡೌನ್‌ನಿಂದಾಗಿ ಭಾರತದಲ್ಲಿ ಉಳಿದುಕೊಂಡಿದ್ದಾರೆ ಎಂಬ ವಿಷಯದ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವಗುರುವಾರ ಈಪ್ರತಿಕ್ರಿಯೆ ನೀಡಿದ್ದಾರೆ.

ಕಾನ್ಸುಲೇಟ್‌ ಜತೆಗೆ ಸಂಪರ್ಕಿಸುವ, ಲುಕ್‍ಔಟ್ ಸುತ್ತೋಲೆಗಳನ್ನು ಅಳಿಸಿರುವ ಬಗ್ಗೆ ಮತ್ತು ಆಯಾ ದೇಶಗಳಿಗೆ ಸುಗಮವಾಗಿ ವಾಪಾಸು ಕಳುಹಿಸುವುದರ ಬಗ್ಗೆ ಸಚಿವಾಲಯ ಹೇಗೆ ಕಾರ್ಯನಿರ್ವಹಿಸಿತ್ತು ಎಂಬುದರ ಬಗ್ಗೆ ಹೇಳಿದವಕ್ತಾರ, ನಾವು ಆಯಾ ವಿದೇಶಿ ರಾಯಭಾರ ಕಚೇರಿಗಳಿಗೆ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ತಿಳಿಸಿದ್ದೇವೆ ಎಂದಿದ್ದಾರೆ.

ADVERTISEMENT

ಆಗಸ್ಟ್ 24ರವರೆಗೆ 1095 ಲುಕ್‌ಔಟ್ ಸುತ್ತೋಲೆಗಳನ್ನು ಅಳಿಸಲಾಗಿದೆ.ಅದೇ ವೇಳೆ ತಬ್ಲೀಗಿ ಜಮಾತ್‌ನ 630 ವಿದೇಶಿ ಸದಸ್ಯರು ಭಾರತ ಬಿಟ್ಟು ಹೋಗಿದ್ದಾರೆ ಎಂದು ಹೇಳಿದ್ದಾರೆ.

ವೀಸಾ ನಿಯಮ ಉಲ್ಲಂಘನೆ ಮಾಡಿ ಇತರ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ ಎಂಬ ಆರೋಪದಲ್ಲಿ ವಿದೇಶಿಯರ ಕಾಯ್ದೆಯಡಿಯಲ್ಲಿ ಈ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕಾದರೆ ಸೂಕ್ತ ವರ್ಗದ ವೀಸಾವನ್ನು ಪಡೆದಿರಬೇಕಾಗುತ್ತದೆ ಎಂದಿದ್ದಾರೆ ಶ್ರೀವಾಸ್ತವ.

ಮುಂದಿನ ತಿಂಗಳು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಶಾಂಘೈ ಕಾರ್ಪರೇಷನ್ ಆರ್ಗನೈಸೇಷನ್ (ಎಸ್‌ಸಿಒ) ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿದ ವಕ್ತಾರ, ಈ ಸಭೆ ಮಾಸ್ಕೊದಲ್ಲಿ ನಡೆಯಲಿದ್ದು, ಸಚಿವರು ಪಾಲ್ಗೊಳ್ಳುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.