ADVERTISEMENT

ಆ. 31ರ ಒಳಗೆ ಅಮೆರಿಕ ಹೊರ ಹೋಗಲೇಬೇಕು, ಸ್ಥಳಾಂತರ ನಿಲ್ಲಿಸಬೇಕು: ತಾಲಿಬಾನ್‌

ಏಜೆನ್ಸೀಸ್
Published 24 ಆಗಸ್ಟ್ 2021, 15:35 IST
Last Updated 24 ಆಗಸ್ಟ್ 2021, 15:35 IST
ತಾಲಿಬಾನ್‌ ವಕ್ತಾರ ಜಬಿವುಲ್ಲಾ ಮುಜಾಹಿದ್
ತಾಲಿಬಾನ್‌ ವಕ್ತಾರ ಜಬಿವುಲ್ಲಾ ಮುಜಾಹಿದ್   

ಕಾಬೂಲ್‌: ಅಫ್ಘಾನಿಸ್ತಾನದಿಂದ ತನ್ನ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಅಮೆರಿಕ ಆಗಸ್ಟ್‌ 31ರ ಒಳಗಾಗಿ ಪೂರ್ಣಗೊಳಿಸಬೇಕು ಎಂದು ತಾಲಿಬಾನ್‌ ಮತ್ತೊಮ್ಮೆ ತಿಳಿಸಿದೆ.

ಇದೇ ಆಗಸ್ಟ್‌ 31ರ ಒಳಗಾಗಿ ಅಮೆರಿಕದ ಭದ್ರತಾ ಪಡೆಗಳನ್ನು ಹಿಂದಕ್ಕೆ ಕರೆದುಕೊಳ್ಳುವ ತೀರ್ಮಾನವನ್ನೂ ಬೈಡನ್‌ ಸರ್ಕಾರ ಮಾಡಿದೆ.

'ಗುಡುವು ವಿಸ್ತರಣೆಯನ್ನು ತಾಲಿಬಾನ್‌ ಒಪ್ಪಿಕೊಳ್ಳುವುದಿಲ್ಲ" ಎಂದು ಸಂಘಟನೆಯ ವಕ್ತಾರ ಜಬಿವುಲ್ಲಾ ಮುಜಾಹಿದ್ ತಿಳಿಸಿದ್ದಾರೆ. 'ದೇಶದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ, ವಿಮಾನ ನಿಲ್ದಾಣದಲ್ಲಿನ ಅವ್ಯವಸ್ಥೆ ಸಮಸ್ಯೆಯಾಗಿ ಉಳಿದಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ತಾಲಿಬಾನ್ ಮತ್ತು ಸಿಐಎ (ಅಮೆರಿಕದ ಗುಪ್ತಚರ ಇಲಾಖೆ) ನಡುವಿನ ಯಾವುದೇ ಭೇಟಿಯ ಬಗ್ಗೆ ತನಗೆ ತಿಳಿದಿಲ್ಲ’ ಎಂದು ಮುಜಾಹಿದ್ ಹೇಳಿದ್ದಾರೆ. ಆದರೆ ಸಭೆ ನಡೆದಿರುವುದನ್ನು ಅವರು ನಿರಾಕರಿಸಿಲ್ಲ.

ಸಿಐಎ ನಿರ್ದೇಶಕರೊಬ್ಬರು ಸೋಮವಾರ ಕಾಬೂಲ್‌ನಲ್ಲಿ ತಾಲಿಬಾನ್‌ನ ಉನ್ನತ ಮಟ್ಟದ ನಾಯಕರನ್ನು ಭೇಟಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.