ADVERTISEMENT

ತಮಿಳುನಾಡಿನ ಕೊಯಮತ್ತೂರಿನಲ್ಲಿ ಉಪಾಹಾರ ಗೃಹ ತೆರೆದ ತೃತೀಯ ಲಿಂಗಿಗಳು

ಏಜೆನ್ಸೀಸ್
Published 9 ಸೆಪ್ಟೆಂಬರ್ 2020, 2:17 IST
Last Updated 9 ಸೆಪ್ಟೆಂಬರ್ 2020, 2:17 IST
ಉಪಹಾರ ಗೃಹದ ಮುಂದೆ ನಿಂತು ಮಾತನಾಡುತ್ತಿರುವ ಕೊಯಮತ್ತೂರು ತೃತೀಯ ಲಿಂಗಿಗಳ ಸಂಘದ ಮುಖ್ಯಸ್ಥೆ ಸಂಗೀತಾ
ಉಪಹಾರ ಗೃಹದ ಮುಂದೆ ನಿಂತು ಮಾತನಾಡುತ್ತಿರುವ ಕೊಯಮತ್ತೂರು ತೃತೀಯ ಲಿಂಗಿಗಳ ಸಂಘದ ಮುಖ್ಯಸ್ಥೆ ಸಂಗೀತಾ    

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ ತೃತೀಯ ಲಿಂಗಿಗಳ ಗುಂಪೊಂದು 'ಕೊವಾಯ್‌ ಟ್ರಾನ್ಸ್ ಕಿಚನ್' ಎಂಬ ಉಪಾಹಾರ ಗೃಹವನ್ನು ತೆರೆದಿದೆ.

ಲಾಕ್‌ಡೌನ್‌ ಸಮಯದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಿರುವ ತೃತೀಯ ಲಿಂಗಿಗಳು ಭಿಕ್ಷಾಟನೆ ನಿಲ್ಲಿಸಿ ಸ್ವಾವಲಂಬಿಗಳಾಗಬೇಕೆನ್ನುವುದು ಇದರ ಹಿಂದಿನ ಉದ್ದೇಶವಾಗಿದೆ.

ಈ ಬಗ್ಗೆ ಮಾತನಾಡಿರುವ ಕೊಯಮತ್ತೂರು ತೃತೀಯ ಲಿಂಗಿಗಳ ಸಂಘದ ಮುಖ್ಯಸ್ಥೆ ಸಂಗೀತಾ ಎಂಬುವವರು, 'ನಾವು ಕೊಯಮತ್ತೂರಿನಲ್ಲೇ ಇನ್ನೊಂದು ಉಪಾಹಾರ ಗೃಹವನ್ನು ತೆರೆಯಲು ಯೋಜಿಸಿದ್ದೇವೆ. ನಮ್ಮ ಸಮುದಾಯದ ಜನರು ಭಿಕ್ಷಾಟನೆಯನ್ನು ನಿಲ್ಲಿಸಿ ಸ್ವಾವಲಂಬಿಗಳಾಗುವುದು ಮುಖ್ಯವಾಗಿದೆ' ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.