ADVERTISEMENT

ಅಣ್ಣಾಮಲೈ ವಿರುದ್ಧ ಬಂಡಾಯ: ತಮಿಳುನಾಡು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ರಾಜೀನಾಮೆ

ಪಿಟಿಐ
Published 5 ಮಾರ್ಚ್ 2023, 14:27 IST
Last Updated 5 ಮಾರ್ಚ್ 2023, 14:27 IST
ಸಿಟಿಆರ್‌ ನಿರ್ಮಲ್‌ ಕುಮಾರ್‌
ಸಿಟಿಆರ್‌ ನಿರ್ಮಲ್‌ ಕುಮಾರ್‌    

ಚೆನ್ನೈ (ಪಿಟಿಐ): ತಮಿಳುನಾಡು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಸಿಟಿಆರ್‌ ನಿರ್ಮಲ್‌ ಕುಮಾರ್‌ ಅವರು ಭಾನುವಾರ ಬಿಜೆಪಿಗೆ ರಾಜೀನಾಮೆ ನೀಡಿ, ಇದೇ ದಿನವೇ ಎಐಎಡಿಎಂಕೆ ಅಧ್ಯಕ್ಷ ಕೆ. ಪಳನಿಸ್ವಾಮಿ ಅವರನ್ನು ಭೇಟಿಯಾಗಿ, ಪಕ್ಷಕ್ಕೆ ಸೇರ್ಪಡೆಗೊಂಡರು.

ನಿರ್ಮಲ್‌ ಕುಮಾರ್ ಅವರು ಭಾನುವಾರ ಟ್ವೀಟ್‌ ಮಾಡಿದ್ದು, ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರ ವಿರುದ್ಧ ಹರಿಹಾಯ್ದಿದ್ದಾರೆ. ‘ಪಕ್ಷದ ಕಾರ್ಯಕರ್ತರ ಕುರಿತು ರಾಜ್ಯ ನಾಯಕರಿಗೆ ಸ್ವಲ್ಪವೂ ಗೌರವ ಇಲ್ಲ. ಪಕ್ಷದ ಕಾರ್ಯಕರ್ತರ ಮೇಲೆಯೇ ಅಣ್ಣಾಮಲೈ ಅವರು ‘ಕಣ್ಗಾವಲು’ ಇರಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಣ್ಣಾಮಲೈ ಅವರ ಆಪ್ತ ಅಮರ್‌ ಪ್ರಸಾದ್‌ ರೆಡ್ಡಿ ಅವರು, ಕುಮಾರ್‌ ಅವರ ‘ಕಣ್ಗಾವಲು’ ಆರೋಪವನ್ನು ಅಲ್ಲಗಳೆದಿದ್ದಾರೆ. ‘ಕುಮಾರ್‌ ಅವರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ’ ಎಂದೂ ಹೇಳಿದ್ದಾರೆ.

ADVERTISEMENT

ಭಯಪಡಬೇಡಿ: ವಲಸೆ ಕಾರ್ಮಿಕರಿಗೆ ರಾಜ್ಯಪಾಲರ ಮನವಿ

ಚೆನ್ನೈ (ಪಿಟಿಐ):‌ ‘ತಮಿಳುನಾಡು ಜನರು ಸ್ನೇಹಪರತೆ ಇರುವವರು, ಒಳ್ಳೆಯವರು. ಆದ್ದರಿಂದ ವಲಸೆ ಕಾರ್ಮಿಕರು ಅಸುರಕ್ಷಿತ ಭಾವ ಅನುಭವಿಸಬೇಕಿಲ್ಲ; ಭಯಪಡುವ ಅವಶ್ಯಕತೆಯೂ ಇಲ್ಲ’ ಎಂದು ತಮಿಳುನಾಡು ರಾಜ್ಯಪಾಲ ಆರ್‌.ಎನ್‌. ರವಿ ಅವರು ಭಾನುವಾರ ಹೇಳಿದ್ದಾರೆ.

ತಮಿಳು, ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ರಾಜಭವನವು ಭಾನುವಾರ ಟ್ವೀಟ್‌ ಮಾಡಿದೆ. ‘ಉತ್ತರ ಭಾರತದ ವಲಸೆ ಕಾರ್ಮಿಕರು ಭಯ ಪಡುವ ಅವಶ್ಯಕತೆ ಇಲ್ಲ. ರಾಜ್ಯ ಸರ್ಕಾರವು ನಿಮ್ಮ ಸುರಕ್ಷತೆಗಾಗಿ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.