ADVERTISEMENT

ತಮಿಳ್‌ ತಾಯ್‌ ವಜುತು: ನಾಡಗೀತೆಯನ್ನಾಗಿ ಘೋಷಿಸಿದ ತಮಿಳುನಾಡು ಸರ್ಕಾರ

ಪಿಟಿಐ
Published 17 ಡಿಸೆಂಬರ್ 2021, 10:40 IST
Last Updated 17 ಡಿಸೆಂಬರ್ 2021, 10:40 IST
ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌
ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌   

ಚೆನ್ನೈ: ತಮಿಳು ಭಾಷೆಯ ಹಿರಿಮೆಯನ್ನು ಶ್ಲಾಘಿಸುವ ಸ್ವಾಗತ ಗೀತೆ ‘ತಮಿಳ್‌ ತಾಯ್ ವಜುತು’ ಅನ್ನು ನಾಡಗೀತೆಯಾಗಿತಮಿಳುನಾಡು ಸರ್ಕಾರ ಶುಕ್ರವಾರ ಘೋಷಿಸಿದೆ.

‘ಗೀತೆಯ ಅವಧಿ 55 ಸೆಕೆಂಡ್‌. ನಾಡಗೀತೆಯ ಸ್ಥಾನಮಾನ ನೀಡಿರುವ ಕಾರಣ ಗಾಯನದ ವೇಳೆ ಅಂಗವಿಕಲರನ್ನು ಹೊರತುಪಡಿಸಿ, ಹಾಜರಿರುವ ಎಲ್ಲರೂ ಎದ್ದುನಿಂತು ಗೌರವ ಸಲ್ಲಿಸಬೇಕು’ ಎಂದು ಸರ್ಕಾರ ಸೂಚಿಸಿದೆ.

ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ ‘ತಮಿಳ್‌ ತಾಯ್‌ ವಜುತು’ ಕೇವಲ ಪ್ರಾರ್ಥನಾ ಗೀತೆ. ಅದು, ರಾಷ್ಟ್ರಗೀತೆಯಲ್ಲ. ಹೀಗಾಗಿ, ಅದರ ಗಾಯನದ ವೇಳೆ ಎಲ್ಲರೂ ಎದ್ದುನಿಲ್ಲುವ ಅಗತ್ಯವಿಲ್ಲ ಎಂದು ಹೇಳಿತ್ತು. ಇದರ ಹಿಂದೆಯೇ ರಾಜ್ಯ ಸರ್ಕಾರ ಉಲ್ಲೇಖಿತ ಗೀತೆಗೆ ನಾಡಗೀತೆಯ ಸ್ಥಾನಮಾನವನ್ನು ನೀಡಿ ಆದೇಶ ಹೊರಡಿಸಿದೆ.

ADVERTISEMENT

ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸರ್ಕಾರಿ ಕಚೇರಿಗಳು, ಸಾರ್ವಜನಿಕ ವಲಯ ಸಂಸ್ಥೆಗಳಲ್ಲಿ ಕಾರ್ಯಕ್ರಮ ಆರಂಭಕ್ಕೆ ಮುನ್ನ ಇದರ ಗಾಯನ ಕಡ್ಡಾಯ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.