
ಚೆನ್ನೈ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ, ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ, ನಟ ವಿಜಯ್ ಅವರಿಗೆ ಸ್ಫರ್ಧಿಸಲು ಯಾವ ಕ್ಷೇತ್ರವನ್ನು ಆಯ್ಕೆ ಮಾಡಬೇಕು ಎಂಬುದರ ಕುರಿತು ಪಕ್ಷದ ನಾಯಕರು ಯೋಚಿಸುತ್ತಿದ್ದಾರೆ.
ಚೆನ್ನೈನ 16 ವಿಧಾನಸಭೆ ಕ್ಷೇತ್ರಗಳಲ್ಲಿ ಒಂದು ಅಥವಾ ತಮಿಳುನಾಡಿನ ಮಧ್ಯಭಾಗದ ಕ್ಷೇತ್ರವೊಂದರಿಂದ ವಿಜಯ್ ಅವರು ಸ್ಫರ್ಧಿಸುತ್ತಾರೆ ಎಂದು ಟಿವಿಕೆ ಮೂಲಗಳು ತಿಳಿಸಿವೆ.
ತಮಿಳುನಾಡಿನ ವಿರುಗಂಬಕ್ಕಂ, ಚೆನ್ನೈನ ವೇಲಾಚೆರಿ, ವಿಲ್ಲುಪುರಂ ಜಿಲ್ಲೆಯ ವಿಕ್ರವಂಡಿ, ವೇದಾರಣ್ಯಂ ಹಾಗೂ ನಾಗಪತ್ತಿನಂ ಸೇರಿದಂತೆ ಹಲವು ಕ್ಷೇತ್ರಗಳನ್ನು ಸ್ಫರ್ಧೆಗೆ ಪರಿಗಣಿಸಲಾಗಿದೆ. ಶೀಘ್ರವೇ ಕ್ಷೇತ್ರವನ್ನು ಆಯ್ಕೆ ಮಾಡಿ, ಸಾರ್ವಜನಿಕವಾಗಿ ಘೋಷಿಸಲಾಗುವುದು.
‘ವಿ’ ಅಕ್ಷರಗಳಿಂದ ಪ್ರಾರಂಭವಾಗುವ ಕ್ಷೇತ್ರವು ‘ವಿಜಯ್’ ಹಾಗೂ ‘ವಿಕ್ಟರಿ’ಯನ್ನು ಸಂಕೇತಿಸುತ್ತದೆ. ಇದು ಚೊಚ್ಚಲ ಚುನಾವಣೆಯ ಗೆಲುವನ್ನು ಸೂಚಿಸುತ್ತದೆ. ವಿಜಯ್ ಅವರು ಜೋತಿಷಿಗಳು, ‘ವಿ’ ಅಕ್ಷರದಿಂದ ಪ್ರಾರಂಭವಾಗುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಿದ್ದಾರೆ ಎನ್ನಲಾಗಿದೆ.
ಏಪ್ರಿಲ್– ಮೇನಲ್ಲಿ ತಮಿಳುನಾಡು ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.