ADVERTISEMENT

ಜಯಲಲಿತಾ ನಿವಾಸ ಸ್ವಾಧೀನಕ್ಕೆ ಸುಗ್ರೀವಾಜ್ಞೆ

ಪಿಟಿಐ
Published 23 ಮೇ 2020, 3:50 IST
Last Updated 23 ಮೇ 2020, 3:50 IST
ತಮಿಳುನಾಡಿನ ಮಾಜಿ ಮುಖ್ಯಮಂತ್ರ ದಿ. ಜೆ. ಜಯಲಲಿತಾ
ತಮಿಳುನಾಡಿನ ಮಾಜಿ ಮುಖ್ಯಮಂತ್ರ ದಿ. ಜೆ. ಜಯಲಲಿತಾ    
""

ಚೆನ್ನೈ: ಪೊಯಸ್‌ ಗಾರ್ಡನ್‌ನಲ್ಲಿರುವ ಜಯಲಲಿತಾ ಅವರ ಭವ್ಯ ಬಂಗಲೆ, ವೇದ ನಿಲಯಮ್‌ ಅನ್ನು ತಾತ್ಕಾಲಿಕವಾಗಿ ಸ್ವಾಧೀನಪಡಿಸಿಕೊಳ್ಳಲು ರಾಜ್ಯಪಾಲ ಬನ್ವರಿ ಲಾಲ್‌ ಪುರೋಹಿತ್ ಅವರು ಶುಕ್ರವಾರ ಸುಗ್ರೀವಾಜ್ಞೆ ಹೊರಡಿಸಿದ್ದಾರೆ.

ಜಯಲಲಿತಾ ಅವರ ನಿವಾಸವನ್ನುಸ್ಮಾರಕವಾಗಿಸಲು ತಾತ್ಕಾಲಿಕವಾಗಿಸ್ವಾಧೀನಕ್ಕೆ ಪಡೆಯಲಾಗಿದೆ.

ಚೆನ್ನೈನ ಪೊಯಸ್‌ ಗಾರ್ಡನ್‌ಲ್ಲಿರುವ ಜಯಲಲಿತಾ ಅವರ ‘ವೇದ ನಿಲಯಂ’

ಜಯಲಿತಾ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ, ಅದರ ಮೂಲಕ ಸ್ಮಾರಕ ನಿರ್ಮಿಸುವ ರಾಜ್ಯ ಸರ್ಕಾರದ ಯೋಜನೆಗೂ ಈ ಸುಗ್ರೀವಾಜ್ಞೆಯಿಂದ ಬಲಬಂದಂತಾಗಿದೆ.

ADVERTISEMENT

ಜಯಲಲಿತಾ ಅವರು ವಾಸಿಸುತ್ತಿದ್ದ ಮನೆ ‘ವೇದ ನಿಲಯಂ’ ಅನ್ನು ಸ್ಮಾರಕ ಎಂದು ಘೋಷಿಸಿ, 2019ರ ಜೂನ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.