ADVERTISEMENT

ತಮಿಳುನಾಡು: ಮಂಗಟ್ಟೆ ಪಕ್ಷಿ ಸಂರಕ್ಷಣಾ ಕೇಂದ್ರ ಸ್ಥಾಪನೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 15:55 IST
Last Updated 21 ಜುಲೈ 2025, 15:55 IST
ಮಂಗಟ್ಟೆ ಪಕ್ಷಿ
ಮಂಗಟ್ಟೆ ಪಕ್ಷಿ   

ಚೆನ್ನೈ: ಮಂಗಟ್ಟೆ(ಹಾರ್ನ್‌ಬಿಲ್) ಪಕ್ಷಿ ಸಂರಕ್ಷಣಾ ಕೇಂದ್ರವನ್ನು ಸ್ಥಾಪಿಸಲು ತಮಿಳುನಾಡು ಸರ್ಕಾರ ಅನುಮತಿ ನೀಡಿದೆ.

ಭಾರತದಲ್ಲಿ ಮಂಗಟ್ಟೆ ಪಕ್ಷಿಗಳ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ತಮಿಳುನಾಡಿನ ಅಣ್ಣಾಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಂಗಟ್ಟೆ ಸಂರಕ್ಷಣಾ ಕೇಂದ್ರ ಆರಂಭಗೊಳ್ಳಲಿದೆ. 

ಮಂಗಟ್ಟೆಗಳ ಪ್ರಮಾಣ, ಸಂತಾನೋತ್ಪತಿ, ನಡವಳಿಕೆಗಳ ಕುರಿತ ಅಧ್ಯಯನ ಮತ್ತು ಮಂಗಟ್ಟೆಗಳಿಗೆ ಆಹಾರ ನೀಡುವ ಮರಗಳನ್ನು ನೆಡುವುದು ಮತ್ತು ಅವುಗಳ ಬಗ್ಗೆ ಜಾಗೃತಿ ಮೂಡಿಸುವುದು ಸೇರಿದಂತೆ ಹಲವು ಕಾರ್ಯಗಳು ಸಂರಕ್ಷಣಾ ಕೇಂದ್ರದ ಮೂಲಕ ನಡೆಯಲಿದೆ ಎಂದು ತಮಿಳುನಾಡು ಅರಣ್ಯ ಮತ್ತು ಜೀವಶಾಸ್ತ್ರ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸುಪ್ರೀಯಾ ಸಾಹು ಅವರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.