ADVERTISEMENT

ತಂದೂರಿ ಕೊಲೆ ಪ್ರಕರಣ: ಆರೋಪಿ ಬಿಡುಗಡೆಗೆ ಹೈಕೋರ್ಟ್ ಆದೇಶ

ಪಿಟಿಐ
Published 21 ಡಿಸೆಂಬರ್ 2018, 19:33 IST
Last Updated 21 ಡಿಸೆಂಬರ್ 2018, 19:33 IST

ನವದೆಹಲಿ: ತಂದೂರಿ ಕೊಲೆ ಪ್ರಕರಣವೆಂದೇ ಕುಖ್ಯಾತಿ ಪಡೆದಿದ್ದ ಪತ್ನಿ ನೈನಾ ಸಾಹ್ನಿಯನ್ನು ಹತ್ಯೆ ಮಾಡಿ ಕಳೆದ 20 ವರ್ಷಗಳಿಂದ ಜೈಲಿನಲ್ಲಿ ಇರುವ ಸುಶೀಲ್ ಶರ್ಮಾನನ್ನು ತಕ್ಷಣವೇ ಬಿಡುಗಡೆಗೊಳಿಸಲು ದೆಹಲಿ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.

ಯುವ ಕಾಂಗ್ರೆಸ್ ಮುಖಂಡನಾಗಿದ್ದ ಸುಶೀಲ್ ಶರ್ಮಾ, ಪತ್ನಿ ಆಕೆಯ ಸ್ನೇಹಿತನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ಕಾರಣಕ್ಕೆ 1995ರಲ್ಲಿ ಆಕೆಯನ್ನು ಹತ್ಯೆ ಮಾಡಿದ್ದ. ನಂತರ ಪುರಾವೆಗಳನ್ನು ನಾಶಪಡಿಸುವ ಉದ್ದೇಶದಿಂದ ದೇಹವನ್ನು ಕತ್ತರಿಸಿ ರೆಸ್ಟೋರೆಂಟ್‌ನ ತಂದೂರಿ ಒಲೆಯೊಳಗೆ ಹಾಕಿದ್ದ. ಹಾಗಾಗಿ ಈ ಪ್ರಕರಣವು ತಂದೂರಿ ಕೊಲೆ ಪ್ರಕರಣವೆಂದೇ ಕುಖ್ಯಾತಿ ಪಡೆದಿತ್ತು.‌

ಶಿಕ್ಷೆಯನ್ನು ಕಡಿತಗೊಳಿಸಿ ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಶಿಕ್ಷೆ ಪರಾಮರ್ಶೆ ಮಂಡಳಿಗೆ ಶರ್ಮಾ ಸಲ್ಲಿಸಿದ್ದ ಅರ್ಜಿ ತಿರಸ್ಕಾರಗೊಂಡಿತ್ತು. ಇವೆಲ್ಲವನ್ನು ಪಕ್ಕಕ್ಕಿರಿಸಿರುವ ಹೈಕೋರ್ಟ್‌, 20 ವರ್ಷ ಜೈಲಿನಲ್ಲೆ ಕಳೆದಿರುವ ಕಾರಣ ಕೂಡಲೇ ಆತನನ್ನು ಬಿಡುಗಡೆ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.