ನವದೆಹಲಿ: ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ ಲಿಮಿಟೆಡ್ (ಟಿಎಎಸ್‌ಎಲ್) ಎಂಜಿನಿಯರಿಂಗ್ ಮೇಜರ್ ಇಂದ್ರಾ ಸಹಯೋಗದಲ್ಲಿ ಸುಧಾರಿತ ನೌಕಾ ವಾಯು ಕಣ್ಗಾವಲು ರೇಡಾರ್ ಅನ್ನು ನಿರ್ಮಿಸಿದೆ.
3ಡಿ ವಾಯು ಕಣ್ಗಾವಲು ರೇಡಾರ್ (3ಡಿ–ಎಎಸ್‌ಆರ್) ತಯಾರಿಸುವ ಮೂಲಕ ಮುಂದಿನ ಪೀಳಿಗೆಯ ನೌಕಾ ಕಣ್ಗಾವಲು ರೇಡಾರ್ ವ್ಯವಸ್ಥೆಯನ್ನು ನಿರ್ಮಿಸುವ ಹಾಗೂ ಸಂಯೋಜಿಸುವ ಸಾಮರ್ಥ್ಯ ಪ್ರದರ್ಶಿಸಿದ ಭಾರತದ ಮೊದಲ ಕಂಪನಿಯಾಗಿದೆ. ಭಾರತೀಯ ನೌಕಾಪಡೆಯ ಯುದ್ಧನೌಕೆಯಲ್ಲಿ 3ಡಿ–ಎಎಸ್‌ಆರ್– ಲಾಂಜಾ–ಎನ್ ಅನ್ನು ಯಶಸ್ವಿಯಾಗಿ ನಿಯೋಜಿಸಲಾಗಿದೆ ಎಂದು ಟಿಎಎಸ್‌ಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದ ರಕ್ಷಣಾ ಸ್ವಾವಲಂಬನೆಯ ಅನ್ವೇಷಣೆಯಲ್ಲಿ ಇದು ಪ್ರಮುಖ ಮೈಲಿಗಲ್ಲಾಗಿದೆ. ಯುದ್ಧನೌಕೆಯ ಎಲ್ಲ ವ್ಯವಸ್ಥೆಗಳೊಂದಿಗೆ ಹೊಂದಾಣಿಕೆ ಸಾಧಿಸುವಂತೆ ರೇಡಾರ್‌ಅನ್ನು ತಯಾರಿಸಲಾಗಿದೆ. ಕರ್ನಾಟಕದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್‌ನಲ್ಲಿ ರೇಡಾರ್‌ನ ಜೋಡಣೆ, ಸಂಯೋಜನೆ ಹಾಗೂ ಪರೀಕ್ಷಾ ಕಾರ್ಯವನ್ನು ನಡೆಸಲಾಗಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.