ADVERTISEMENT

ಟಾಟಾ ಟ್ರಸ್ಟ್ ಅಧ್ಯಕ್ಷ ನೋಯೆಲ್ ಟಾಟಾ ತಾಯಿ ನಿಧನ

ಪಿಟಿಐ
Published 5 ಡಿಸೆಂಬರ್ 2025, 5:12 IST
Last Updated 5 ಡಿಸೆಂಬರ್ 2025, 5:12 IST
<div class="paragraphs"><p>ಸಿಮೋನ್‌ ಟಾಟಾ </p></div>

ಸಿಮೋನ್‌ ಟಾಟಾ

   

ಕೃಪೆ: X / @happy2tok

ಮುಂಬೈ: ಟಾಟಾ ಟ್ರಸ್ಟ್‌ ಅಧ್ಯಕ್ಷ ನೋಯೆಲ್‌ ಟಾಟಾ ಅವರ ತಾಯಿ ಸಿಮೋನ್‌ ಟಾಟಾ ಅವರು ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ.

ADVERTISEMENT

ರತನ್‌ ಟಾಟಾ ಅವರ ಮಲತಾಯಿ ಸಿಮೋನ್‌ ಅವರಿಗೆ 95 ವರ್ಷ ವಯಸ್ಸಾಗಿತ್ತು.

ಉದ್ಯಮ ವ್ಯವಹಾರದಲ್ಲಿ ತೊಡಗಿಕೊಂಡಿದ್ದ ಸಿಮೋನ್‌ ಅವರು, ಪರೋಪಕಾರಿ ಕೆಲಸಗಳಿಗೂ ಹೆಸರಾಗಿದ್ದರು. 'ಸೌಂದರ್ಯವರ್ಧಕ 'ಲ್ಯಾಕ್ಮೆ' ಭಾರತದ ಪ್ರಮುಖ ಕಾಸ್ಮೆಟಿಕ್‌ ಆಗಿ ಬೆಳೆಯಲು ಸಿಮೋನ್‌ ಪ್ರಮುಖ ಪಾತ್ರ ವಹಿಸಿದ್ದರು ಎಂದು ವರದಿಯಾಗಿದೆ.

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಜನಿಸಿದ್ದ ಸಿಮೋನ್‌ ಅವರು, ಸರ್‌ ರತನ್‌ ಟಾಟಾ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳ ಜನಪರ ಕಾರ್ಯಗಳಿಗೆ ಮಾರ್ಗದರ್ಶನ ಮಾಡಿದ್ದರು.

ಮುಂಬೈನ ಕೊಲಾಬದಲ್ಲಿರುವ ಕ್ಯಾಥೆಡ್ರಲ್ ಆಫ್ ದಿ ಹೋಲಿ ನೇಮ್ ಚರ್ಚ್‌ನಲ್ಲಿ ಸಿಮೋನ್‌ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.