ADVERTISEMENT

ಲೋಕಸಭೆ: ತೆರಿಗೆ ಕಾನೂನು ತಿದ್ದುಪಡಿ ಮಸೂದೆ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 10:10 IST
Last Updated 11 ಆಗಸ್ಟ್ 2025, 10:10 IST
<div class="paragraphs"><p>ನಿರ್ಮಲಾ ಸೀತಾರಾಮನ್</p></div>

ನಿರ್ಮಲಾ ಸೀತಾರಾಮನ್

   

ಪಿಟಿಐ ಚಿತ್ರ

ನವದೆಹಲಿ: ಏಕೀಕೃತ ಪಿಂಚಣಿದಾರರಿಗೆ ತೆರಿಗೆ ವಿನಾಯಿತಿ ನೀಡುವುದನ್ನೂ ಒಳಗೊಂಡ ತೆರಿಗೆ ಕಾನೂನುಗಳ ತಿದ್ದುಪಡಿ ಮಸೂದೆ 2025 ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಇಂದು (ಸೋಮವಾರ) ಮಂಡಿಸಿದರು.

ADVERTISEMENT

ಸೌದಿ ಅರೇಬಿಯಾದ ಕೆಲ ಸಾರ್ವಜನಿಕ ಹೂಡಿಕೆಗಳಿಗೆ ನೇರ ತೆರಿಗೆ ಪ್ರಯೋಜಗಳನ್ನು ಕಲ್ಪಿಸುವ ಹಾಗೂ ಆದಾಯ ತೆರಿಗೆಯಲ್ಲಿ ಕೆಲ ಬದಲಾವಣೆಗಳನ್ನು ಒಳಗೊಂಡ ತಿದ್ದುಪಡಿ ಮಸೂದೆ ಇದಾಗಿದೆ.

ತೆರಿಗೆ ಕಾನೂನುಗಳ ತಿದ್ದುಪಡಿ ಮಸೂದೆ 2025ರಲ್ಲಿ ಆದಾಯ ತೆರಿಗೆ 1961 ಹಾಗೂ ಹಣಕಾಸು ಕಾಯ್ದೆ 2025ರ ತಿದ್ದುಪಡಿಯನ್ನು ಒಳಗೊಂಡಿದೆ.

ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ಲಭ್ಯವಿರುವ ಎಲ್ಲಾ ಪ್ರಯೋಜನಗಳು ಏ. 1ರಿಂದ ಜಾರಿಗೆ ಬಂದಿರುವ ಏಕೀಕೃತ ಪಿಂಚಣಿ ಯೋಜನೆಯಲ್ಲೂ ಸಿಗಲಿದೆ ಎಂದು ಸರ್ಕಾರವು ಕಳೆದ ಜುಲೈನಲ್ಲಿ ಹೇಳಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.