ಕಡಪ (ಆಂಧ್ರಪ್ರದೇಶ): ಟಿಡಿಪಿ ವರಿಷ್ಠ ಮತ್ತು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಮುಂದಿನ ಎರಡು ವರ್ಷದ ಅವಧಿಗೆ ಪಕ್ಷದ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ.
ಮೂರು ದಿನ ನಡೆಯುತ್ತಿರುವ ಪಕ್ಷದ ವಾರ್ಷಿಕ ಸಮಾವೇಶ ‘ಮಹಾನಾಡು’ನ ಎರಡನೇ ದಿನವಾದ ಬುಧವಾರ ಭಾರಿ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಸೇರಿದ್ದ ಸಭೆಯಲ್ಲಿ ಟಿಡಿಪಿಯ ಹಿರಿಯ ನಾಯಕ ವರ್ಲಾ ರಾಮಯ್ಯ ಅವರು ಚುನಾವಣೆಯ ಫಲಿತಾಂಶ ಪ್ರಕಟಿಸಿದರು. ನಂತರ ನಾಯ್ಡು ಅವರಿಗೆ ಪಕ್ಷದ ಪ್ರಮುಖರ ಹರ್ಷೋದ್ಗಾರದ ನಡುವೆ ಪ್ರಮಾಣ ವಚನ ಬೋಧಿಸಿದರು.
ಈ ಚುನಾವಣೆಯ ಪ್ರಕ್ರಿಯೆಗಾಗಿ ಪಕ್ಷವು ಚುನಾವಣಾ ಕಚೇರಿ ತೆರೆದಿತ್ತು. ನಾಯ್ಡು ಅವರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ ಮಾಡಲು ಪಕ್ಷದ ಸುಮಾರು 600 ನಾಯಕರು ಬೆಂಬಲ ಸೂಚಿಸಿದರು ಎಂದು ರಾಮಯ್ಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.