ADVERTISEMENT

ಅಡುಗೆ ಸಿಬ್ಬಂದಿ ಪತಿಯನ್ನು ಕೊಲೆ ಮಾಡಲು ಶಿಕ್ಷಕನಿಂದ ಸುಪಾರಿ: ಕಾರಣ ಇದೇ

ಪಿಟಿಐ
Published 1 ಡಿಸೆಂಬರ್ 2025, 14:28 IST
Last Updated 1 ಡಿಸೆಂಬರ್ 2025, 14:28 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

ಮೇದಿನಿನಗರ (ಜಾರ್ಖಂಡ್): ಬಿಸಿಯೂಟ ಸಿಬ್ಬಂದಿ ಪತಿಯ ಕೊಲೆಯತ್ನ ನಡೆಸಿದ ಆರೋಪದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕ ಹಾಗೂ ಮೂವರು ಬಾಡಿಗೆ ಕೊಲೆಗಾರರನ್ನು ಜಾರ್ಖಂಡ್‌ನ ಪಲಾಮು ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಆರೋಪಿ ಶಿಕ್ಷಕ ಸತ್ಯದೇವ ವಿಶ್ವಕರ್ಮ (50) ಎಂಬಾತನಿಗೆ ಅಡುಗೆ ಸಿಬ್ಬಂದಿ ಜೊತೆ ಸಂಬಂಧ ಹೊಂದುವ ಇರಾದೆ ಇತ್ತು. ಇದಕ್ಕೆ ಆಕೆಯ ಪತಿ ತಡೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶಿಕ್ಷಕನ ನಡವಳಿಕೆ ಬಗ್ಗೆ ಸಿಬ್ಬಂದಿ ತನ್ನ ಪತಿಗೆ ಹೇಳಿದ್ದಳು. ಈ ಬಗ್ಗೆ ಶಿಕ್ಷಕ ಹಾಗೂ ಆಕೆಯ ಪತಿ ನಡುವೆ ಜಗಳ ನಡೆದಿತ್ತು. ಹೀಗಾಗಿ ಆಕೆಯ ಪತಿಯನ್ನು ಕೊಲೆ ಮಾಡುವ ಯೋಜನೆ ಹಾಕಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೀಷ್ಮಾ ರಮೇಶನ್ ಹೇಳಿದ್ದಾರೆ.

ಆತನನ್ನು ಕೊಲೆ ಮಾಡಲು ₹ 40 ಸಾವಿರ ನೀಡಿ ಬಾಡಿಗೆ ಕೊಲೆಗಾರರಿಗೆ ಸುಪಾರಿ ನೀಡಿದ್ದ. ಈ ಯೋಜನೆ ತಿಳಿದ ಪೊಲೀಸರು, ಕೊಲೆಗಾರರು ಅಡುಗೆ ಸಿಬ್ಬಂದಿ ಮನೆಗೆ ತೆರಳುವಾಗ ಬಂಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಅವರಿಂದ ಪಿಸ್ತೂಲು ಹಾಗೂ ಎರಡು ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಜವಂಶ ಪರ್ಹಿಯಾ (52), ರಾಜು ಸಾವು (35) ಹಾಗೂ ಮಂತು ಕುಮಾರ್ ಪರ್ಹಿಯಾ (33) ಎಂಬವರನ್ನು ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.