ADVERTISEMENT

ಬೆಂಗಳೂರಿನ ಟೆಕಿ ಆತ್ಮಹತ್ಯೆ: ಉತ್ತರ ಪ್ರದೇಶದಲ್ಲಿ ಅತ್ತೆ, ಬಾಮೈದ ನಾಪತ್ತೆ

ಪಿಟಿಐ
Published 12 ಡಿಸೆಂಬರ್ 2024, 13:49 IST
Last Updated 12 ಡಿಸೆಂಬರ್ 2024, 13:49 IST
<div class="paragraphs"><p>ಅತುಲ್ ಸುಭಾಷ್</p></div>

ಅತುಲ್ ಸುಭಾಷ್

   

(ಎಕ್ಸ್ ಸ್ಕ್ರೀನ್‌ಶಾಟ್)

ಜೌನಾಪುರ: ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಟೆಕಿ ಅತುಲ್ ಸುಭಾಷ್ ಅವರ ಅತ್ತೆ ಮತ್ತು ಬಾಮೈದ ಗುರುವಾರ ಜೌನಾಪುರದಲ್ಲಿರುವ ತಮ್ಮ ಮನೆಯಿಂದ ಪಲಾಯನ ಮಾಡಿದ್ದಾರೆ. ಆದರೆ, ಕರ್ನಾಟಕದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ.

ADVERTISEMENT

ಬೆಂಗಳೂರಿನಲ್ಲಿ ತನ್ನ ತೊರೆದುಹೋದ ಪತ್ನಿ ಮತ್ತು ಆಕೆಯ ಕುಟುಂಬದವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ 34ರ ಹರೆಯದ ಅತುಲ್ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಟೆಕಿಯ ಪತ್ನಿ ನಿಕಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ, ತಂದೆ ಅನುರಾಗ್‌ ಮತ್ತು ಚಿಕ್ಕಪ್ಪ ಸುಶೀಲ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ಮಧ್ಯರಾತ್ರಿ 1ರಲ್ಲಿ ನಿಶಾ ಸಿಂಘಾನಿಯಾ ಮತ್ತು ಆಕೆಯ ಪುತ್ರ ಅನುರಾಗ್‌ ಆಲಿಯಾಸ್‌ ಪೀಯುಶ್‌ ಸಿಂಘಾನಿಯಾ ಖೋವಾ ಮಂಡಿ ಪ್ರದೇಶದಿಂದ ದ್ವಿಚಕ್ರ ವಾಹನದಲ್ಲಿ ತೆರಳಿದ್ದು, ಇನ್ನೂ ವಾಪಸಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನಿಕಿತಾ ಅವರು ಪತಿ ಸುಭಾಶ್‌, ಅತ್ತೆ ಮತ್ತು ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿ, ಎಫ್‌ಐಆರ್‌ ದಾಖಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.