ADVERTISEMENT

ಉತ್ತರ ಪ್ರದೇಶ | ಬಾಲಕಿ ಮೇಲೆ ಕಾನ್‌ಸ್ಟೆಬಲ್ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:51 IST
Last Updated 3 ಜುಲೈ 2025, 15:51 IST
-----
-----   

ಫರೂಖಾಬಾದ್: ಉತ್ತರ ಪ್ರದೇಶದ ನವಾಬ್‌ಗಂಜ್ ಪ್ರದೇಶದಲ್ಲಿ 15 ವರ್ಷದ ಬಾಲಕಿಯನ್ನು ಅಪಹರಣ ಮಾಡಿದ ಪೊಲೀಸ್ ಕಾನ್‌ಸ್ಟೆಬಲ್‌ ಒಬ್ಬರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಕೃತ್ಯ ಎಸಗಿದ ಕಾನ್‌ಸ್ಟೆಬಲ್‌ ಅನ್ನು ಅಮಾನತು ಮಾಡಿ ಎಪ್‌ಐಆರ್ ದಾಖಲು ಮಾಡಲಾಗಿದೆ.

ಪಿಯುಸಿ ವಿದ್ಯಾರ್ಥಿನಿ ಬುಧವಾರ ತರಗತಿ ಮುಗಿಸಿ ಮನೆಗೆ ವಾಪಸಾಗದಿದ್ದಾಗ ಕುಟುಂಬ ಸದಸ್ಯರು ಹುಡುಕಾಡಿದ್ದರು. ತನ್ನ ಮಗಳು ಕಾನ್‌ಸ್ಟೆಬಲ್ ವಿನಯ್‌ ಚವಾಣ್ ಕಾರಿನಲ್ಲಿದ್ದುದನ್ನು ಕಂಡು ಅವರನ್ನು ಹಿಡಿದಿದ್ದಾಗಿ ಬಾಲಕಿ ತಂದೆ ಪೊಲೀಸರಿಗೆ ತಿಳಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ನವಾಬ್‌ಗಂಜ್‌ ಪ್ರದೇಶದಲ್ಲಿ ವಿನಯ್ ಕೆಲಸ ಮಾಡಿದ್ದರು. ಕಾನ್‌ಸ್ಟೆಬಲ್ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಎಸ್‌ಪಿ ಆರತಿ ಸಿಂಗ್‌ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.