ADVERTISEMENT

ಕೋತಿಗಳ ಗುಂಪಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಚಾವಣಿ ಮೇಲಿಂದ ಬಿದ್ದು ಬಾಲಕಿ ಸಾವು!

ಪಿಟಿಐ
Published 20 ಅಕ್ಟೋಬರ್ 2020, 14:28 IST
Last Updated 20 ಅಕ್ಟೋಬರ್ 2020, 14:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಜಾಫರ್‌ನಗರ: ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ಮಂಗಳವಾರ ಕೋತಿಗಳ ಗುಂಪೊಂದು ಬೆನ್ನಟ್ಟಿ ಬಂದಿದ್ದರಿಂದಾಗಿ ತಪ್ಪಿಸಿಕೊಳ್ಳಲು ಹೋಗಿ 13 ವರ್ಷದ ಬಾಲಕಿ ತನ್ನ ಮನೆಯ ಚಾವಣಿಯಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಭೋಪಾ ಪೊಲೀಸ್ ಠಾಣೆ ಪ್ರದೇಶದ ನಾಲಿ ಗ್ರಾಮದಲ್ಲಿ ಎಂಟನೇ ತರಗತಿ ಓದುತ್ತಿದ್ದ ಬಾಲಕಿ ಚಾವಣಿ ಮೇಲೆ ಹಾರಾಕಿದ್ದ ಬಟ್ಟೆಯನ್ನು ತರಲು ಹೋಗಿದ್ದ ವೇಳೆ ಕೋತಿಗಳ ಗುಂಪೊಂದು ಅಟ್ಟಿಸಿಕೊಂಡು ಬಂದಿವೆ. ಅವುಗಳಿಂದ ತಪ್ಪಿಸಿಕೊಳ್ಳಲೆಂದು ಓಡಿ ಚಾವಣಿ ಮೇಲಿಂದ ಬಿದ್ದಿದ್ದಾಳೆ ಎಂದು ತಿಳಿಸಿದ್ದಾರೆ.

ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆವೇಳೆಗಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ADVERTISEMENT

ಪ್ರತ್ಯೇಕ ಘಟನೆಯೊಂದರಲ್ಲಿ ಜಿಲ್ಲೆಯ ಭೋಪಾ ಪೊಲೀಸ್ ಠಾಣೆ ಪ್ರದೇಶದ ಗಂಗಾ ಕಾಲುವೆಯಲ್ಲಿಅಪರಿಚಿತ ಮಹಿಳೆಯ ಶವವನ್ನು ಪತ್ತೆಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.