ADVERTISEMENT

ಆರ್‌ಜೆಡಿ ಸಚಿವರಿಗೆ ತೇಜಸ್ವಿ ಯಾದವ್ ನೀತಿ ಸಂಹಿತೆ ಜಾರಿ

ಪಿಟಿಐ
Published 20 ಆಗಸ್ಟ್ 2022, 14:30 IST
Last Updated 20 ಆಗಸ್ಟ್ 2022, 14:30 IST
ತೇಜಸ್ವಿ ಪ್ರಸಾದ್‌ ಯಾದವ್‌
ತೇಜಸ್ವಿ ಪ್ರಸಾದ್‌ ಯಾದವ್‌   

ಪಟನಾ: ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ್‌ ಯಾದವ್‌ ಶನಿವಾರ ಆರ್‌ಜೆಡಿ ಪಕ್ಷದ ಸಂಪುಟ ಸಚಿವರಿಗೆ ನೀತಿ ಸಂಹಿತೆ ಜಾರಿ ಮಾಡಿದ್ದಾರೆ. ಈ ಮೂಲಕ, ಆರ್‌ಜೆಡಿಯ ಹಲವು ಸಚಿವರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಬಗ್ಗೆ ಟೀಕೆ ವ್ಯಕ್ತವಾಗುತ್ತಿರುವ ನಡುವೆಯೇ ಪಕ್ಷದ ವರ್ಚಸ್ಸು ಹೆಚ್ಚಿಸಲು ಯತ್ನಿಸಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪಕ್ಷದ ಸಚಿವರು ಅನುಸರಿಸಬೇಕಾದ ನೀತಿಸಂಹಿತೆಗಳನ್ನು ತೇಜಸ್ವಿ ಯಾದವ್ ತಿಳಿಸಿದ್ದಾರೆ. ಸಚಿವರು ಹೊಸ ಕಾರುಗಳನ್ನು ಖರೀದಿಸಬಾರದು, ಭೇಟಿ ನೀಡಲು ಬರುವ ಕಾರ್ಯಕರ್ತರಿಗೆ ಕಾಲು ಮುಟ್ಟಿ ನಮಸ್ಕರಿಸಲು ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ.

ಭೇಟಿ ವೇಳೆ ನಮಸ್ತೆ ಹೇಳಬೇಕು, ಧರ್ಮ, ಜಾತಿಯನ್ನು ಎಣಿಸದೆ ಬಡವರಿಗೆ ನೆರವಾಗಬೇಕು,ಹೂಗುಚ್ಛದ ಬದಲಿಗೆ ಪುಸ್ತಕ ಪೆನ್ನುಗಳನ್ನು ನೀಡಲು ಉತ್ತೇಜನ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.