ADVERTISEMENT

ತೆಲಂಗಾಣ ವಿಧಾನಸಭೆ ಚುನಾವಣೆ 2023: ಮತದಾನ ಆರಂಭ

119 ಕ್ಷೇತ್ರಗಳಿರುವ ತೆಲಂಗಾಣ ವಿಧಾನಸಭೆಗೆ ಮತದಾನ ಶುರು-ಆಡಳಿತಾರೂಢ ಬಿಆರ್‌ಎಸ್‌, ಕಾಂಗ್ರೆಸ್‌ ಮತ್ತು ಬಿಜೆಪಿ ಕಣದಲ್ಲಿರುವ ಪ್ರಮುಖ ಪಕ್ಷಗಳು.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ನವೆಂಬರ್ 2023, 2:13 IST
Last Updated 30 ನವೆಂಬರ್ 2023, 2:13 IST
<div class="paragraphs"><p>ತೆಲಂಗಾಣ ವಿಧಾನಸಭೆ ಚುನಾವಣೆ-ಮತದಾನ ಆರಂಭ</p></div>

ತೆಲಂಗಾಣ ವಿಧಾನಸಭೆ ಚುನಾವಣೆ-ಮತದಾನ ಆರಂಭ

   

-ಚಿತ್ರ ಕೃಪೆ ಪಿಟಿಐ

ಹೈದರಾಬಾದ್: ತೆಲಂಗಾಣದ ಎಲ್ಲಾ 119 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು (ಗುರುವಾರ) ಬೆಳಿಗ್ಗೆ 7ರಿಂದ ಮತದಾನ ಆರಂಭಗೊಂಡಿದ್ದು, ಸಂಜೆ 6ರವರೆಗೆ ನಡೆಯಲಿದೆ.

ADVERTISEMENT

ಆಡಳಿತಾರೂಢ ಬಿಆರ್‌ಎಸ್‌, ಕಾಂಗ್ರೆಸ್‌ ಮತ್ತು ಬಿಜೆಪಿ ಕಣದಲ್ಲಿರುವ ಪ್ರಮುಖ ಪಕ್ಷಗಳು. ಹೈದರಾಬಾದ್‌ನ ಕೆಲವೆಡೆ ಎಐಎಂಐಎಂ ಕೂಡ ಸ್ಪರ್ಧಿಸಿದೆ.

119 ಕ್ಷೇತ್ರಗಳಿರುವ ತೆಲಂಗಾಣ ವಿಧಾನಸಭೆಗೆ 3.17 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಸೇರಿದಂತೆ 109 ಪಕ್ಷಗಳಿಂದ ಒಟ್ಟು 2,290 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ರಾಜ್ಯದಾದ್ಯಂತ 35,655 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. 2.8 ಲಕ್ಷ ಸಿಬ್ಬಂದಿ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ. 12 ಸಾವಿರ ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ.

ಸ್ಪರ್ಧಿಗಳಲ್ಲಿ 221 ಮಹಿಳೆಯರು ಹಾಗೂ ಓರ್ವ ತೃತೀಯ ಲಿಂಗಿ ಸೇರಿದ್ದಾರೆ. ಒಟ್ಟು 103 ಮಂದಿ ಶಾಸಕರು ಈ ಬಾರಿ ಮರು ಸ್ಪರ್ಧಿಸುತ್ತಿದ್ದು, ಬಹುತೇಕರು ಆಡಳಿತಾರೂಢ ಬಿಆರ್‌ಎಸ್‌ನಿಂದ ಕಣಕ್ಕಿಳಿದಿದ್ದಾರೆ.

‘ತೆಲಂಗಾಣದಲ್ಲಿ ಪ್ರಪ್ರಥಮ ಬಾರಿಗೆ 80 ವರ್ಷ ಮೇಲ್ಪಟ್ಟ ನಾಗರಿಕರು ಮತ್ತು ಅಂಗವಿಕಲರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸುಮಾರು 27,600 ಮತದಾರರು ಮನೆಯಿಂದಲೇ ಮತ ಚಲಾಯಿಸಲಿದ್ದಾರೆ' ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ವಿಕಾಸ್ ರಾಜ್ ತಿಳಿಸಿದ್ದಾರೆ. ಡಿ.3ರಂದು ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.