ADVERTISEMENT

‘ನಾನು ಕೃಷಿಕ, ನನ್ನ ಬಳಿ ಸ್ವಂತ ಕಾರಿಲ್ಲ’: ಆದಾಯ ವಿವರ ಸಲ್ಲಿಸಿದ ತೆಲಂಗಾಣ ಸಿಎಂ

ಏಜೆನ್ಸೀಸ್
Published 15 ನವೆಂಬರ್ 2018, 8:05 IST
Last Updated 15 ನವೆಂಬರ್ 2018, 8:05 IST
   

ಹೈದರಾಬಾದ್‌: ಅಂದಾಜು ₹22.60 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು, ವಾರ್ಷಿಕ ₹2.07 ಕೋಟಿ ಆದಾಯ ಗಳಿಸುತ್ತಿದ್ದರೂ ತಮ್ಮ ಬಳಿ ಸ್ವಂತ ಕಾರು ಇಲ್ಲ ಎಂದು ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್ ಅವರುಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.

ಗಾಜ್ವಾಲ್‌ ಕ್ಷೇತ್ರದಿಂದವಿಧಾನಸಭೆಗೆ ಸ್ಪರ್ಧಿಸಲು ಉದ್ದೇಶಿಸಿರುವ ರಾವ್‌, ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸುವ ಸಂದರ್ಭಅಫಿಡವಿಟ್‌ ಮೂಲಕ ತಮ್ಮ ಆದಾಯ ವಿವರಣೆನೀಡಿದ್ದಾರೆ.

ರಾವ್‌ ಅವರು ಕೃಷಿಕರಾಗಿದ್ದು, ಅವರ ಪತ್ನಿ ಶೋಭಾ ಗೃಹಿಣಿ ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ. ₹10.40 ಕೋಟಿ ಮೌಲ್ಯದ ಚರಾಸ್ತಿ ಹಾಗೂ ₹12.20 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿಯೂ ಉಲ್ಲೇಖಿಸಲಾಗಿದೆ.

ADVERTISEMENT

ಸಿದ್ದಿಪೇಟ್‌ ಜಿಲ್ಲೆಯ ಎರವಳ್ಳಿ ಗ್ರಾಮದಲ್ಲಿ ₹6.50 ಕೋಟಿ ಮೌಲ್ಯದ 54 ಎಕರೆ ಕೃಷಿ ಭೂಮಿ ಇದೆ. ಹೈದರಾಬಾದ್‌ ಹಾಗೂ ಕರೀಂನಗರ್‌ನಲ್ಲಿ ಒಟ್ಟು ₹5.10 ಮೌಲ್ಯದ ಸ್ವಂತ ಮನೆಗಳು ಇವೆ. ₹60 ಲಕ್ಷ ಬೆಲೆಬಾಳುವ 2.04 ಎಕರೆ ಕೃಷಿಯೇತರ ಭೂಮಿ ಇದ್ದು, ₹2.40 ಲಕ್ಷ ಬೆಲೆ ಬಾಳುವ 75 ಗ್ರಾಂ ಚಿನ್ನ ಹಾಗೂ₹ 2.40 ಹಣ ಇರುವುದಾಗಿ ಮಾಹಿತಿ ನೀಡಿದ್ದಾರೆ.

ಪತ್ನಿಯು₹93,595 ಸಾವಿರ ನಗದು ಹೊಂದಿದ್ದಾರೆ. ₹93.66 ಲಕ್ಷ ಬೆಲೆ ಬಾಳುವ ಒಟ್ಟು 2,200 ಗ್ರಾಂ,ಚಿನ್ನ, ವಜ್ರ ಹಾಗೂ ಮುತ್ತು ರತ್ನದ ಆಭರಣಗಳನ್ನು ಹೊಂದಿದ್ದಾರೆ. ಜೊತೆಗೆ ಅವರ ಬಳಿ ₹94.60 ಕೋಟಿ ಮೌಲ್ಯದ ಚರಾಸ್ತಿ ಇರುವುದಾಗಿಯೂ ತಿಳಿಸಿ‌ದ್ದಾರೆ.

ಇಷ್ಟಿದ್ದರೂ ತಮ್ಮ ಬಳಿಯಾಗಲೀ, ಪತ್ನಿಯ ಹೆಸರಿನಲ್ಲಾಗಲಿ ಸ್ವಂತ ಕಾರು ಇಲ್ಲ, ತಾವು ಸರ್ಕಾರಿ ವಾಹನದಲ್ಲೇ ಪ್ರಯಾಣಿಸುವುದಾಗಿ ಹೇಳಿಕೊಂಡಿದ್ದಾರೆ.

ತಮ್ಮ ಮಗ ಕೆ.ಟಿ. ರಾಮ ರಾವ್‌ ಬಳಿ ಪಡೆದಿರುವ ₹82.87 ಲಕ್ಷ ಸಾಲ ಹಾಗೂ ಸಂಬಂಧಿ ಶೈಲಿಮಾ ಅವರಿಂದ ಪಡೆದಿರುವ ₹24.60 ಲಕ್ಷ ಸೇರಿ ಒಟ್ಟು ₹8.88 ಕೋಟಿ ಸಾಲದ ಲೆಕ್ಕವನ್ನೂ ನೀಡಿದ್ದಾರೆ.

2012–13ರಲ್ಲಿ ₹16.94 ಕೋಟಿ ಮೌಲ್ಯದ ಆಸ್ತಿ ಹಾಗೂ ವಾರ್ಷಿಕ ₹6.59 ಲಕ್ಷಆದಾಯ ಗಳಿಸುತ್ತಿರುವುದಾಗಿಆದಾಯ ತೆರಿಗೆ ಸಲ್ಲಿಕೆ ಮಾಡಲಾಗಿದೆ ಎಂದು2014ರ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ವಿವರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.