ರೇವಂತ ರೆಡ್ಡಿ
– ಪಿಟಿಐ ಚಿತ್ರ
ಹೈದರಾಬಾದ್: ಹಿಂದುಳಿದ ವರ್ಗಗಳ (ಬಿ.ಸಿ) ಮೀಸಲಾತಿಯನ್ನು ಶೇ 42ಕ್ಕೆ ಏರಿಸುವ ಮತ್ತು ಪರಿಶಿಷ್ಟ ಜಾತಿಯ (ಎಸ್‌ಸಿ) ಉಪವರ್ಗೀಕರಣಕ್ಕೆ ಸಂಬಂಧಿಸಿದ ಎರಡು ಮಹತ್ವದ ಮಸೂದೆಗಳಿಗೆ ತೆಲಂಗಾಣ ವಿಧಾನಸಭೆ ಸೋಮವಾರ ಅಂಗೀಕಾರ ನೀಡಿದೆ.
ಹಿಂದುಳಿದ ವರ್ಗಗಳ ಮೀಸಲಾತಿ ಹೆಚ್ಚಳದಿಂದ ಒಟ್ಟಾರೆ ಮೀಸಲಾತಿ ಪ್ರಮಾಣ ಶೇ 50 ಅನ್ನು ದಾಟಲಿದೆ. ಹೀಗಾಗಿ ಆ ಮಸೂದೆಯನ್ನು ಸಂಸತ್ತಿನ ಅಂಗೀಕಾರಕ್ಕಾಗಿ ಕಳುಹಿಸಲಾಗುತ್ತದೆ.
ಎಸ್.ಸಿ ಉಪ ವರ್ಗೀಕರಣ ಮಸೂದೆಯು ಪರಿಷತ್ತಿನಲ್ಲಿ ಅಂಗೀಕಾರ ಆಗಬೇಕಿದೆ. ಇದು ಕಾನೂನು ಆದರೆ, ಸುಪ್ರೀಂ ಕೋರ್ಟ್ ಅನುಮತಿಸಿದಂತೆ ಎಸ್.ಸಿ ಉಪ ವರ್ಗೀಕರಣವನ್ನು ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಎಂಬ ಹಿರಿಮೆಗೆ ತೆಲಂಗಾಣ ಪಾತ್ರವಾಗಲಿದೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇ42ಕ್ಕೆ ಏರಿಸಲಾಗುವುದು ಎಂದು ಚುನಾವಣೆ ವೇಳೆ ಕಾಂಗ್ರೆಸ್ ಭರವಸೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.