ADVERTISEMENT

ಪೂಜೆಗೆಂದು ಹೆಲಿಕಾಪ್ಟರನ್ನೇ ದೇವಸ್ಥಾನಕ್ಕೆ ತಂದ ಉದ್ಯಮಿ

ಐಎಎನ್ಎಸ್
Published 15 ಡಿಸೆಂಬರ್ 2022, 9:58 IST
Last Updated 15 ಡಿಸೆಂಬರ್ 2022, 9:58 IST
   

ಹೈದರಾಬಾದ್‌: ಬೈಕ್‌, ಕಾರುಗಳನ್ನು ಪೂಜೆಗಾಗಿ ದೇವಸ್ಥಾನಗಳಿಗೆ ತರುವುದು ಸಾಮಾನ್ಯ. ಆದರೆ, ತೆಲಂಗಾಣದ ಈ ಉದ್ಯಮಿ ತಾವು ಖರೀದಿಸಿದ ಹೊಸ ಹೆಲಿಕಾಪ್ಟರ್ ಅನ್ನು ದೇವಸ್ಥಾನಕ್ಕೆ ತಂದು, ಪೂಜೆ ಮಾಡಿಸಿದ್ದಾರೆ.

ಹೈದರಾಬಾದ್‌ನ ‘ಪ್ರತಿಮಾ ಗ್ರೂಪ್‌’ನ ಮಾಲೀಕ ಬೋಯಿನಪಲ್ಲಿ ಶ್ರೀನಿವಾಸ್ ರಾವ್ ಅವರು ಕುಟುಂಬ ಸದಸ್ಯರೊಂದಿಗೆ ಏರ್‌ಬಸ್ ACH-135ರಲ್ಲಿ ಹೈದರಾಬಾದ್‌ನಿಂದ 100 ಕಿ.ಮೀ ದೂರದ ಯಾದಾದ್ರಿ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದಾರೆ.

ಮೂವರು ಪುರೋಹಿತರ ಮಾರ್ಗದರ್ಶನದಲ್ಲಿ ಶ್ರೀನಿವಾಸ್‌ ಕುಟುಂಬಸ್ಥರು ಹೆಲಿಕಾಪ್ಟರ್‌ಗೆ ಪೂಜೆ ನೆರವೇರಿಸಿದರು. ಏರ್‌ಬಸ್ ACH-135 ಬೆಲೆ 5.7 ಮಿಲಿಯನ್ ಡಾಲರ್‌ (₹47.15 ಕೋಟಿ) ಇದೆ. ಹೆಲಿಕಾಪ್ಟರ್‌ಗೆ ಸಲ್ಲಿಸಿದ ಪೂಜೆ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

ADVERTISEMENT

ಶ್ರೀನಿವಾಸ್ ರಾವ್ ಅವರ ಸಂಬಂಧಿ ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಕೂಡ ಪೂಜೆಯಲ್ಲಿ ಇದ್ದರು. ಪೂಜೆ ನಂತರ, ಕುಟುಂಬಸ್ಥರೆಲ್ಲರೂ ಯಾದಾದ್ರಿ ಬೆಟ್ಟದ ಸುತ್ತಲೂ ಹೆಲಿಕಾಪ್ಟರ್‌ನಲ್ಲಿ ಒಂದು ಸುತ್ತು ಹಾಕಿದರು.

‘ಪ್ರತಿಮಾ ಗ್ರೂಪ್’ ಕಂಪನಿಯು ಮೂಲಸೌಕರ್ಯ, ಇಂಧನ, ಉತ್ಪಾದನೆ, ಟೆಲಿಕಾಂ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದೆ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳನ್ನೂ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.