ಸಾಂದರ್ಭಿಕ ಚಿತ್ರ
ಅಮರಾವತಿ: ಬಿಸಿಲಿನ ತೀವ್ರತೆಯಿಂದಾಗಿ ಮೃತಪಟ್ಟವರಿಗೆ ಹೆಚ್ಚಿನ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶಾಖಾಘಾತವನ್ನು ‘ರಾಜ್ಯ ನಿರ್ದಿಷ್ಟ ವಿಪತ್ತು‘ ಎಂದು ತೆಲಂಗಾಣ ಸರ್ಕಾರ ಮಂಗಳವಾರ ಘೋಷಿಸಿದೆ.
ಈ ಹೊಸ ಆದೇಶದಿಂದಾಗಿ ಈ ಹಿಂದೆ ಬಿಸಿಲಿನ ತಾಪಕ್ಕೆ ಮೃತ ಕುಟುಂಬಗಳಿಗೆ ಆಪತ್ಬಂಧು ಯೋಜನೆಯಡಿ ನೀಡುತ್ತಿದ್ದ ₹50,000 ಪರಿಹಾರವನ್ನು ₹4 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಮೂಲಕ ಆ ಕುಟುಂಬಗಳಿಗೆ ಆರ್ಥಿಕವಾಗಿ ಕೊಂಚ ಮಟ್ಟಿಗೆ ನೆರವಾಗಲಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಬಿಸಿಲಿನ ತಾಪಾದಿಂದ ಮೃತಪಟ್ಟ ವರದಿಗಳು ಸಂಖ್ಯೆ ಇಳಿಮುಖವಾಗಿದೆ. ತೆಲಂಗಾಣದ ಐದು ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ 28 ಜಿಲ್ಲೆಗಳಲ್ಲಿ ಕನಿಷ್ಠ 15 ದಿನಗಳ ಕಾಲ ಬಿಸಿಲಿನ ತಾಪ ಕಂಡುಬಂದಿದೆ ಎಂದು ಸರ್ಕಾರ ತಿಳಿಸಿದೆ.
ಶಾಖಾಘಾತದಿಂದ ಮೃತಪಟ್ಟ ವ್ಯಕ್ತಿಗಳನ್ನು ಗುರುತಿಸಲು ಜಿಲ್ಲಾಡಳಿತ ನೆರವಾಗಲಿದೆ ಎಂದು ಸರ್ಕಾರ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.