ADVERTISEMENT

Telangana Election: ಬಿಆರ್‌ಎಸ್‌ನತ್ತ ಕಾಂಗ್ರೆಸ್‌ ನಾಯಕರು

ಪಿಟಿಐ
Published 31 ಅಕ್ಟೋಬರ್ 2023, 16:30 IST
Last Updated 31 ಅಕ್ಟೋಬರ್ 2023, 16:30 IST
ಕಾಂಗ್ರೆಸ್‌ (ಕಡತ ಚಿತ್ರ)
ಕಾಂಗ್ರೆಸ್‌ (ಕಡತ ಚಿತ್ರ)   

ಹೈದರಾಬಾದ್‌: ತೆಲಂಗಾಣ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಟಿಕೆಟ್‌ ವಂಚಿತ ಅಭ್ಯರ್ಥಿಗಳು ಕಾಂಗ್ರೆಸ್ ತೊರೆದು ಸಾಮೂಹಿಕವಾಗಿ ಬಿಆರ್‌ಎಸ್‌ ಕದ ತಟ್ಟುತ್ತಿರುವ ಬೆಳವಣಿಗೆ ನಡೆಯುತ್ತಿದೆ.

ಮೂರನೇ ಬಾರಿಗೆ ರಾಜ್ಯದಲ್ಲಿ ಗದ್ದುಗೆಗೇರುವ ನಿಟ್ಟಿನ ಪ್ರಯತ್ನ ನಡೆಸಿರುವ ಬಿಆರ್‌ಎಸ್‌ ಟಿಕೆಟ್‌ ವಂಚಿತ ಕಾಂಗ್ರೆಸ್‌ ಮುಖಂಡರನ್ನು  ಅತ್ಯಂತ ಉತ್ಸಾಹದಿಂದ ತನ್ನತ್ತ ಸೆಳೆಯುತ್ತಿದೆ.   

ಗೆಲ್ಲುವ ಸಾಮರ್ಥ್ಯವೇ ಟಿಕೆಟ್‌ ಹಂಚಿಕೆಗೆ ಪ್ರಮುಖ ಮಾನದಂಡ ಎಂದು ಕಾಂಗ್ರೆಸ್ ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದೆ. 

ADVERTISEMENT

ಅಕ್ಟೋಬರ್‌ 27ರಂದು 45 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿತು. ಮಾಜಿ ಸಚಿವ ನಾಗಮ್‌ ಜನಾರ್ಧನ್‌ ರೆಡ್ಡಿ, ಮಾಜಿ ಶಾಸಕರಾದ ಎರ್ರಾ ಶೇಖರ್‌, ಪಿ. ವಿಷ್ಣುವರ್ಧನ್‌ ರೆಡ್ಡಿ ಸೇರಿ ಹಲವರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.