ಹೈದರಾಬಾದ್: ‘ಛತ್ತೀಸಗಢದಲ್ಲಿ ಮಾವೋವಾದಿ ನಕ್ಸಲರ ವಿರುದ್ಧ ಪೊಲೀಸ್ ಕಾರ್ಯಾಚರಣೆ ತೀವ್ರಗೊಂಡಿರುವ ಬೆನ್ನಲ್ಲೇ, ಸಂಘಟನೆಯ ಕೆಲವು ಮುಖಂಡರು ಶಸ್ತ್ರಾಸ್ತ್ರ ತ್ಯಜಿಸಲು ಒಲವು ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಮುಂದುವರಿಸಲು ಆಸಕ್ತಿ ಹೊಂದಿದ್ದಾರೆ’ ಎಂದು ತೆಲಂಗಾಣದ ಗುಪ್ತಚರ ಮೂಲಗಳು ತಿಳಿಸಿವೆ.
ತೆಲಂಗಾಣದ ಸಿಪಿಐ (ಮಾವೋವಾದಿ) ಮುಖಂಡ ಮಲ್ಲೊಜುಲಾ ವೇಣುಗೋಪಾಲ್ ಅವರು ತಾತ್ಕಾಲಿಕವಾಗಿ ಶಸ್ತ್ರಾಸ್ತ್ರ ತ್ಯಜಿಸುವ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಈ ಸಂಬಂಧ ಕಳೆದು ತಿಂಗಳು ಅವರೇ ಬಿಡುಗಡೆಗೊಳಿಸಿದ ಪತ್ರವು ಸಂಘಟನೆಯಲ್ಲಿ ಆಂತರಿಕ ಸಂಘರ್ಷ ಸೃಷ್ಟಿಸಿದೆ.
ಈ ವಾದವನ್ನು ತಳ್ಳಿ ಹಾಕಿರುವ ಸಿಪಿಐ (ಮಾವೋವಾದಿ) ಕೇಂದ್ರೀಯ ಸಮಿತಿಯು, ಪತ್ರದಲ್ಲಿ ಅವರು ವ್ಯಕ್ತಪಡಿಸಿರುವ ಅಭಿಪ್ರಾಯವು ವೈಯಕ್ತಿಕವಾದದ್ದು ಎಂದು ತಿಳಿಸಿತ್ತು.
ಸಿಪಿಐ (ಮಾವೋವಾದಿ)ಯ ಕೇಂದ್ರಿಯ ಸಮಿತಿಯ 15 ಮಂದಿ ಸದಸ್ಯರಲ್ಲಿ 10 ಮಂದಿ ತೆಲಂಗಾಣ ಮೂಲದವರು ಎಂದು ಇತ್ತೀಚಿಗೆ ಪೊಲೀಸರು ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.