ಹೈದರಾಬಾದ್: ಎಂಜಿನಿಯರಿಂಗ್, ಕಾನೂನು ಮತ್ತಿತರ ಕೋರ್ಸ್ ಬೋಧಿಸುತ್ತಿದ್ದ ಕಾಲೇಜುಗಳು ಸೇರಿದಂತೆ ತೆಲಂಗಾಣದ 1,000ಕ್ಕೂ ಹೆಚ್ಚು ಖಾಸಗಿ ಕಾಲೇಜುಗಳ ತರಗತಿಗಳನ್ನು ಸೋಮವಾರದಿಂದ ಸ್ಥಗಿತಗೊಳಿಸಲಾಗಿದೆ. ಈ ನಿರ್ಧಾರವು ಕನಿಷ್ಠ 14 ಲಕ್ಷ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ.
ಫೆಡರೇಷನ್ ಆಫ್ ಅಸೋಸಿಯೇಷನ್ ಆಫ್ ತೆಲಂಗಾಣ ಹೈಯರ್ ಎಜುಕೇಷನ್ (ಎಫ್‌ಎಟಿಎಚ್‌ಐ) ಭಾನುವಾರ ಸಭೆ ನಡೆಸಿದ ಬಳಿಕ ಕಾಲೇಜುಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿದೆ. ಸರ್ಕಾರದ ಶುಲ್ಕ ಮರುಪಾವತಿ ಯೋಜನೆಯಡಿ ₹7,500 ಕೋಟಿ ಬಿಡುಗಡೆಗೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಎಫ್‌ಎಟಿಎಚ್‌ಐ ಈ ತೀರ್ಮಾನ ಕೈಗೊಂಡಿದೆ.
ಶಿಕ್ಷಣ ಸಂಸ್ಥೆಗಳು ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವುದರಿಂದಾಗಿ ಶಿಕ್ಷಕರು ಮತ್ತು ಸಿಬ್ಬಂದಿಗೆ ಹಲವು ತಿಂಗಳುಗಳಿಂದ ವೇತನ ನೀಡಿಲ್ಲ ಮತ್ತು ತರಗತಿಗಳು ಸುಗಮವಾಗಿ ನಡೆಯದೆ ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ ಎಂದು ಆಡಳಿತ ಮಂಡಳಿಗಳು ತಿಳಿಸಿವೆ.
‘ಭಾನುವಾರ ನಡೆದ ಸಭೆಯಲ್ಲಿ ಸೆಪ್ಟೆಂಬರ್ 15ರಂದು ಎಂಜಿನಿಯರಿಂಗ್ ದಿನವನ್ನು ‘ಕರಾಳ ದಿನ’ವಾಗಿ ಆಚರಿಸಲು ಮತ್ತು ಸರ್ಕಾರ ಬೇಡಿಕೆಯನ್ನು ಈಡೇರಿಸುವವರೆಗೆ ಅನಿರ್ದಿಷ್ಟಾವಧಿಗೆ ಕಾಲೇಜುಗಳನ್ನು ಮುಚ್ಚಲು ನಿರ್ಧರಿಸಲಾಯಿತು’ ಎಂದು ಎಫ್‌ಎಟಿಎಚ್‌ಐ ಅಧ್ಯಕ್ಷ ಎನ್.ರಮೇಶ್ ಬಾಬು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.