
ಹೈದರಾಬಾದ್: ಕಳೆದ ರಾತ್ರಿ ಆಂಧ್ರ ಪ್ರದೇಶದ ಕರಾವಳಿ ದಾಟಿರುವ ಮೊಂಥಾ ಚಂಡಮಾರುತದ ಹೊಡೆತದಿಂದಾಗಿ ತೆಲಂಗಾಣದ ವಿವಿಧೆಡೆ ಭಾರಿ ಮಳೆಯಾಗುತ್ತಿದೆ.
ವಾರಂಗಲ್, ಜನಾಂವ್, ಹನುಮಕೊಂಡ, ಮಹಬೂಬಾಬಾದ್, ಕರೀಂನಗರ, ಸಿದ್ದಿಪೇಟ್, ಯಾದಾದ್ರಿ ಭುವನಗಿರಿ, ಸೂರ್ಯಪೇಟ್, ನಲ್ಗೊಂಡ, ಖಮ್ಮಂ, ಭದ್ರಾದ್ರಿ ಕೊತಗುಡೆಂ, ನಾಗರ್‌ಕರ್ನೂಲ್, ಪೆದ್ದಪಲ್ಲಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಹೈದರಾಬಾದ್‌ನಲ್ಲೂ ಮಳೆಯಾಗಿದೆ. ಕಲ್ಲೇದದಲ್ಲಿ 348.3 ಮಿಮೀ, ರೆಡ್ಲವಾಡದಲ್ಲಿ 301.8 ಮಿಮೀ ಮತ್ತು ಕಪುಲಕನಪರ್ತಿಯಲ್ಲಿ 270.3 ಮಿಮೀ, ವಾರಂಗಲ್ ಜಿಲ್ಲೆಯ ಎಲ್ಲಾ ಮತ್ತು ಹನುಮಕೊಂಡದ ಭೀಮದೇವರಪಲ್ಲೆಯಲ್ಲಿ ಬೆಳಿಗ್ಗೆ 8.30ರಿಂದ ಸಂಜೆ 6ರವರೆಗೆ 253.5 ಮಿಮೀ ಮಳೆಯಾಗಿದೆ ಎಂದು ತೆಲಂಗಾಣ ಅಭಿವೃದ್ಧಿ ಯೋಜನಾ ಸೊಸೈಟಿ ತಿಳಿಸಿದೆ.
ವಾರಂಗಲ್, ಹನುಮಕೊಂಡ, ಮಹಬೂಬಾಬಾದ್, ಜನಗಾಂವ್, ಸಿದ್ದಿಪೇಟೆ ಮತ್ತು ಯಡಾದ್ರಿ ಭುವನಗಿರಿ ಜಿಲ್ಲೆಗಳಲ್ಲಿ ಬುಧವಾರ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಗುಡುಗು, ಮಿಂಚು ಮತ್ತು ಬಿರುಗಾಳಿ (ಗಂಟೆಗೆ 40-50 ಕಿ.ಮೀ) ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದೆ.
24 ಗಂಟೆಗಳಲ್ಲಿ 20 ಸೆ.ಮೀಗೂ ಅಧಿಕ ಮಳೆಯಾಗುವ ಸಾಧ್ಯತೆ ಇರುವೆಡೆ ರೆಡ್ ಅಲರ್ಟ್ ಘೋಷಿಸಲಾಗುತ್ತದೆ.
ಅದಿಲಾಬಾದ್, ಮಂಚೇರಿಯಲ್, ನಿರ್ಮಲ್, ಜಗತಿಹಾಳ್, ರಾಜಣ್ಣ ಸಿರ್ಸಿಲ್ಲಾ, ಕರೀಂನಗರ, ಪೆದ್ದಪಲ್ಲಿ, ಜಯಶಂಕರ್ ಭೂಪಲಪಲ್ಲಿ, ಸೂರ್ಯಪೇಟ್, ಜನಗಾಂವ್, ಸಿದ್ದಿಪೇಟ್, ಯಾಡಾದ್ರಿ ಮತ್ತು ಭೂವನಗಿರಿಯಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರಿ ಮಳೆ ಹಿನ್ನೆಲೆ ಮುನ್ನೆಚ್ಚರಿಕೆ ವಹಿಸುವಂತೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ರಾಜ್ಯದಆಡಳಿತ ವರ್ಗಕ್ಕೆ ಸೂಚನೆ ನೀಡಿದ್ದಾರೆ. ಕೆಲ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.