ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಹಿಮಪಾತ ಮತ್ತು ಸಾಧಾರಣ ಮಳೆಯಿಂದಾಗಿಮನಾಲಿ ಮತ್ತು ಕುಫ್ರಿಯಲ್ಲಿ ತಾಪಮಾನ ಸೊನ್ನೆಗಿಂತ ಕಡಿಮೆಗೆ ಕುಸಿದಿದೆ.
ಕುಲ್ಲು ಜಿಲ್ಲೆಯ ಮನಾಲಿ, ಶಿಮ್ಲಾ ಜಿಲ್ಲೆಯ ಕುಫ್ರಿ, ಚಂಬಾ ಜಿಲ್ಲೆಯ ಡಾಲ್ಹೌಸಿಯಲ್ಲಿ ಕ್ರಮವಾಗಿ 9, 3 ಮತ್ತು 3 ಸೆಂಟಿ ಮೀಟರ್ನಷ್ಟು ಹಿಮಪಾತವಾಗಿದೆ.
ಲೌಹಾಲ್ನ ಕೀಲಾಂಗ್, ಸ್ಪಿತಿ ಮತ್ತು ಕಿನ್ನೌರ್ನ ಕಲ್ಪಾ ಪ್ರದೇಶದಲ್ಲಿ ಸೋಮವಾರ ಸಂಜೆ 5.30ರಿಂದ ಬೆಳಿಗ್ಗೆ 8.30ರವರೆಗೆ ಕ್ರಮವಾಗಿ 15 ಮತ್ತು 24 ಸೆಂಟಿ ಮೀಟರ್ನಷ್ಟು ಹಿಮಪಾತವಾಗಿದೆ.
ಮನಾಲಿ ಮತ್ತು ಕಲ್ಪಾದಲ್ಲಿ ಕನಿಷ್ಠ ತಾಪಮಾನ ಕ್ರಮವಾಗಿ ಮೈನಸ್ 3.8 ಮತ್ತು 3.6 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ.
ಕನಿಷ್ಠ ತಾಪಮಾನ ಮೈನಸ್ 8 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿರುವ ಕೀಲಾಂಗ್, ರಾಜ್ಯದ ಅತ್ಯಂತ ಶೀತ ಪ್ರದೇಶವಾಗಿ ಮುಂದುವರಿದಿದೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.