ADVERTISEMENT

ಅಯೋಧ್ಯೆಯಲ್ಲಿ ಗಗನಚುಂಬಿ ರಾಮ ಮಂದಿರ 4 ತಿಂಗಳಲ್ಲಿ ನಿರ್ಮಾಣ: ಅಮಿತ್ ಶಾ

ಪಿಟಿಐ
Published 16 ಡಿಸೆಂಬರ್ 2019, 14:11 IST
Last Updated 16 ಡಿಸೆಂಬರ್ 2019, 14:11 IST
   

ಪಕುರ್ (ಜಾರ್ಖಂಡ್‌): ‘ಅಯೋಧ್ಯೆಯಲ್ಲಿ ಮುಂದಿನ ನಾಲ್ಕು ತಿಂಗಳಲ್ಲಿ ಗಗನಚುಂಬಿ ಶ್ರೀರಾಮ ದೇವಸ್ಥಾನ ನಿರ್ಮಾಣವಾಗಲಿದೆ. ಇದು, ವಿಶ್ವದಾದ್ಯಂತ ಇರುವ ಹಿಂದೂಗಳ 100 ವರ್ಷಗಳ ಬೇಡಿಕೆಯೂ ಆಗಿತ್ತು’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ.

ಪಕ್ಷದ ಅಭ್ಯರ್ಥಿ ಪರ ಪ್ರಚಾರ ಭಾಷಣ ಮಾಡುತ್ತಿದ್ದ ಅವರು, ರಾಮಜನ್ಮಭೂಮಿ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನಲ್ಲಿ ದೀರ್ಘಾವಧಿಯವರೆಗೂ ಎಳೆದದ್ದು ಏಕೆ?’ ಎಂದು ಕಾಂಗ್ರೆಸ್ ಮುಖಂಡ ಕಪಿಲ್‌ ಸಿಬಲ್‌ ಅವರನ್ನು ತರಾಟೆ ತೆಗೆದುಕೊಂಡರು.

ಇಂದಿಗೂ ಬೆನ್ನಿಗೆ ಚೂರಿ ಹಾಕುವವರು ಇದ್ದಾರೆ. ಅವರು ನಿಮ್ಮ ಪ್ರತಿನಿಧಿ ಆಗಬಾರದು. ಕಾಂಗ್ರೆಸ್‌ನಿಂದ ಅಭಿವೃದ್ಧಿ ಅಸಾಧ್ಯ. 56 ಇಂಚಿನ ಎದೆಯುಳ್ಳ ನರೇಂದ್ರ ಮೋದಿ ಅವರಿಂದ ನಿಮ್ಮ ರಕ್ಷಣೆ, ಅಭಿವೃದ್ಧಿ ಸಾಧ್ಯ’ ಎಂದು ಯಾರ ಹೆಸರನ್ನೂ ಉಲ್ಲೇಖಿಸದೇ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.