ADVERTISEMENT

ಭಯೋತ್ಪಾದನೆಗೆ ನಾಗರಿಕ ಸಮಾಜದಲ್ಲಿ ನೆಲೆಯಿಲ್ಲ: ಶಾಹಿ ಇಮಾಂ

ಪಿಟಿಐ
Published 13 ನವೆಂಬರ್ 2025, 14:30 IST
Last Updated 13 ನವೆಂಬರ್ 2025, 14:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೆಹಲಿಯ ಜಾಮಾ ಮಸೀದಿಯ ಆನುವಂಶಿಕ ಇಮಾಂ (ಶಾಹಿ ಇಮಾಂ) ಸೈಯದ್ ಅಹ್ಮದ್ ಬುಖಾರಿ ಅವರು ಕೆಂಪು ಕೋಟೆ ಬಳಿ ನಡೆದ ಸ್ಫೋಟವನ್ನು ‘ಅಸಹ್ಯಕರ ಭಯೋತ್ಪಾದಕ ದಾಳಿ’ ಎಂದು ಗುರುವಾರ ಕಠಿಣ ಪದಗಳಿಂದ ಖಂಡಿಸಿದ್ದಾರೆ.

ನಾಗರಿಕ ಸಮಾಜದಲ್ಲಿ ಭಯೋತ್ಪಾದನೆಗೆ ಯಾವುದೇ ನೆಲೆಯಿಲ್ಲ; ಅವಕಾಶವೂ ಇಲ್ಲ ಎಂದು ಪ್ರತಿಪಾದಿಸಿರುವ ಅವರು, ಸರ್ಕಾರ ಅಪರಾಧಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.

‘ದೃಢ ಸಂಕಲ್ಪದೊಂದಿಗೆ ಭಯೋತ್ಪಾದನೆ ಪಿಡುಗಿನ ವಿರುದ್ಧ ಒಗ್ಗಟ್ಟಾಗಿ ಹೋರಾಡಲು ಮತ್ತು ಅದನ್ನು ಹಿಮ್ಮೆಟ್ಟಿಸಲು ಸಾಧ್ಯವಾಗುತ್ತದೆ’ ಎಂದು ಇಮಾಂ ಸೈಯದ್ ಅವರು ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.