
ಶ್ರೀನಗರ: 'ವೈಟ್ ಕಾಲರ್ ಭಯೋತ್ಪಾದನಾ ಜಾಲ' ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ವೈದ್ಯರ ನಿವಾಸದ ಮೇಲೆ ಕಾಶ್ಮೀರದ ಕೌಂಟರ್ ಇಂಟೆಲಿಜೆನ್ಸ್(ಸಿಐಕೆ) ಭಾನುವಾರ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನಂತನಾಗ್ ಪ್ರದೇಶದ ಮಲಕ್‌ನಾಗ್‌ನಲ್ಲಿರುವ ಮನೆ ಮೇಲೆ ಸಿಐಕೆ ಅಧಿಕಾರಿಗಳು ರಾತ್ರಿಯ ಸಮಯದಲ್ಲಿ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೋಧದ ಸಮಯದಲ್ಲಿ, ಹರಿಯಾಣ ಮೂಲದ ಮಹಿಳಾ ವೈದ್ಯೆಯೊಬ್ಬರ ಮನೆಯಲ್ಲಿ ಬಾಡಿಗೆದಾರರಾಗಿ ವಾಸಿಸುತ್ತಿರುವುದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.
ಸಿಐಕೆ ಅಧಿಕಾರಿಗಳು ಮನೆಯಿಂದ ಮೊಬೈಲ್ ಫೋನ್ ವಶಪಡಿಸಿಕೊಂಡು ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಕಳುಹಿಸಿದ್ದಾರೆ.
ಈ ಮಧ್ಯೆ, ಭಯೋತ್ಪಾದನಾ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೈ ಫ್ರೂಟ್ ಮಾರಾಟಗಾರ ಬಿಲಾಲ್ ಅಹ್ಮದ್ ವಾನಿ ಮತ್ತು ಅವರ ಮಗ ಜಾಸಿರ್ ಬಿಲಾಲ್ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಈ ಸಂದರ್ಭ ಬಿಲಾಲ್ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ. ಬಳಿಕ, ಅವರನ್ನು ಅನಂತ್‌ನಾಗ್‌ನ ಜಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.