ADVERTISEMENT

ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕ: ಧರ್ಮಾವರಂನಲ್ಲಿ ಬಾಣಸಿಗನ ಬಂಧನ

ಪಿಟಿಐ
Published 16 ಆಗಸ್ಟ್ 2025, 12:46 IST
Last Updated 16 ಆಗಸ್ಟ್ 2025, 12:46 IST
   

ಶ್ರೀ ಸತ್ಯಸಾಯಿ ‌: ಧರ್ಮಾವರಂನ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ಶೇಖ್ ಕೊತ್ವಾಲ್ ನೂರ್ ಮೊಹಮ್ಮದ್ ಎಂಬಾತ ಪಾಕಿಸ್ತಾನ ಮೂಲದ ಭಯೋತ್ಪಾದನ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾನೆಂಬ ಆರೋಪದಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.   

ಮೊಹಮ್ಮದ್‌ನ(42) ಅನುಮಾನಸ್ಪದ ವರ್ತನೆಯನ್ನು ಗಮನಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ವಿಚಾರಣೆಗೆ ಒಳಪಡಿಸಿದಾಗ ನಿಷೇಧಿತ ಭಯೋತ್ಪಾದಕ ಗುಂಪುಗಳಾದ ಜೈಶ್-ಎ-ಮೊಹಮ್ಮದ್ ನಂತಹ ಉಗ್ರಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವುದು ‌ತಿಳಿದು ಬಂದಿದೆ. 

ಮೊಹಮ್ಮದ್‌ ಉಗ್ರ ಸಂಘಟನೆಯ ಪ್ರಭಾವಕ್ಕೆ ಒಳಗಾಗಿ ತರಬೇತಿಯನ್ನು ಪಡೆದಿದ್ದಾನೆ. ಆದರೆ ಯಾವುದೇ ಕೃತ್ಯದಲ್ಲಿ ಈವರೆಗೆ ಭಾಗಿಯಾಗಿಲ್ಲ ಎಂದು ಧರ್ಮಾವರಂನ ಪ್ರಭಾರ ಉಪವಿಭಾಗದ ಪೊಲೀಸ್ ಅಧಿಕಾರಿ ನರಸಿಂಗಪ್ಪ ಹೇಳಿದ್ದಾರೆ. 

ADVERTISEMENT

ಮೊಹಮ್ಮದ್‌ ಭಾರತೀಯ ಪ್ರಜೆಯಾಗಿದ್ದಾನೆ. ಅವನ ಪೂರ್ವಜರು ಧರ್ಮಾವರಂ ನವರೇ ಆಗಿದ್ದಾರೆ. ವಿದೇಶಿ ಸಂಘಟನೆಗಳಿಗಾಗಿ ಕೆಲಸ ಮಾಡುತ್ತಿದ್ದನು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಮುಂದಿನ ತನಿಖೆಯಲ್ಲಿ ಆತನ ಯೋಜನೆಗಳು ಹಾಗೂ ತಂತ್ರಗಳ ಬಗ್ಗೆ ತಿಳಿಯಲಿದೆ ಎಂದು ನರಸಿಂಗಪ್ಪ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.