ADVERTISEMENT

ಜಮ್ಮು–ಕಾಶ್ಮೀರ: ಘೋಷಿತ ಉಗ್ರನ ಕುಟುಂಬದ ₹2 ಕೋಟಿ ಆಸ್ತಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 15:55 IST
Last Updated 4 ಅಕ್ಟೋಬರ್ 2025, 15:55 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಶ್ರೀನಗರ: ಘೋಷಿತ ಉಗ್ರ ಸಜ್ಜದ್ ಅಹ್ಮದ್ ಶೇಖ್ ಅಲಿಯಾಸ್ ಸಜ್ಜದ್ ಗುಲ್‌ ಕುಟುಂಬಕ್ಕೆ ಸೇರಿದ ₹ 2 ಕೋಟಿ ಮೌಲ್ಯದ ಆಸ್ತಿಯನ್ನು ಜಮ್ಮು–ಕಾಶ್ಮೀರ ಪೊಲೀಸರು ಶನಿವಾರ ಮುಟ್ಟುಗೋಲು ಹಾಕಿಕೊಂಡಿದ್ದಾರೆ. 

ಗಡಿ ಭಾಗದಲ್ಲಿ ಭಯೋತ್ಪಾದಕರ ಸಂಪರ್ಕ ಜಾಲ ಮತ್ತು ಬೆಂಬಲಿಗರಿಗೆ ಮತ್ತಷ್ಟು ಕಡಿವಾಣ ಹಾಕುವ ಭಾಗವಾಗಿ ಈ ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ರೋಸ್ ಅವೆನ್ಯೂ ಪ್ರದೇಶದ ಖುಷಿಪೋರಾದಲ್ಲಿ ಸಜ್ಜದ್ ತಂದೆ ಹೆಸರಿನಲ್ಲಿದ್ದ ಮೂರು ಅಂತಸ್ತಿನ ವಸತಿ ಕಟ್ಟಡವನ್ನು ವಶಕ್ಕೆ ಪಡೆಯಲಾಗಿದೆ.

ಸಜ್ಜದ್ ಗುಲ್‌ ಪೊಲೀಸರಿಗೆ ಬೇಕಿರುವ ವ್ಯಕ್ತಿಗಳ ಪಟ್ಟಿಯಲ್ಲಿದ್ದ. ಯುಎಪಿಎ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಸಜ್ಜದ್ ಪಾಕಿಸ್ತಾನದ ನಿರ್ದೇಶನದಂತೆ ಕೆಲಸ ಮಾಡುತ್ತಿದ್ದ. ಉಗ್ರ ಸಂಘಟನೆಯ ಮಾಧ್ಯಮ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದ. ಸಾಮಾಜಿಕ ಮಾಧ್ಯಮಗಳ ಮೂಲಕ ದೇಶ ವಿರೋಧಿ ಪ್ರಚಾರ ಮಾಡುತ್ತಿದ್ದ. ಜಮ್ಮು–ಕಾಶ್ಮೀರ ಯುವಕರನ್ನು ಉಗ್ರ ಸಂಘಟನೆಗಳತ್ತ ಸೆಳೆಯಲು ಪ್ರಚೋದಿಸುತ್ತಿದ್ದ‘ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.