ADVERTISEMENT

ಜಮ್ಮು–ಕಾಶ್ಮೀರದಲ್ಲಿ ಭಾರೀ ದಾಳಿಗೆ ಉಗ್ರರ ಯತ್ನ: ಮುಂದುವರಿದ ಗುಂಡಿನ ಚಕಮಕಿ

ಗಡಿ ನಿಯಂತ್ರಣ ರೇಖೆಯ ಗಂದೇರ್‌ಬಾಲ್ ಪ್ರದೇಶದಲ್ಲಿ 3 ಉಗ್ರರ ಹತ್ಯೆ

ಏಜೆನ್ಸೀಸ್
Published 28 ಸೆಪ್ಟೆಂಬರ್ 2019, 9:11 IST
Last Updated 28 ಸೆಪ್ಟೆಂಬರ್ 2019, 9:11 IST
ಬಾಟೋಟ್ ಪ್ರದೇಶದಲ್ಲಿ ಭದ್ರತಾ ಪಡೆಗಳಿಂದ ಉಗ್ರಹ ನಿಗ್ರಹ ಕಾರ್ಯಾಚರಣೆ ನಡೆಯುತ್ತಿದೆ
ಬಾಟೋಟ್ ಪ್ರದೇಶದಲ್ಲಿ ಭದ್ರತಾ ಪಡೆಗಳಿಂದ ಉಗ್ರಹ ನಿಗ್ರಹ ಕಾರ್ಯಾಚರಣೆ ನಡೆಯುತ್ತಿದೆ   

ಶ್ರೀನಗರ:ಜಮ್ಮು–ಕಾಶ್ಮೀರದ ರಾಂಬಾನ್ ಜಿಲ್ಲೆಯ ಬಾಟೋಟ್ ಪ್ರದೇಶದಲ್ಲಿ ಭಾರೀ ದಾಳಿ ನಡೆಸಲು ಶನಿವಾರ ಬೆಳಿಗ್ಗೆ ಉಗ್ರರು ಯತ್ನಿಸಿದ್ದಾರೆ.

2–3 ಉಗ್ರರು ಜಮ್ಮು–ಶ್ರೀನಗರ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕ ಬಸ್ಸೊಂದನ್ನು ನಿಲ್ಲಿಸಲು ಯತ್ನಿಸಿದ್ದಾರೆ. ಕೂಡಲೇ ಚಾಲಕ ವೇಗವಾಗಿ ಬಸ್ಸನ್ನು ಚಲಾಯಿಸಿ ಪ್ರಯಾಣಿಕರನ್ನು ರಕ್ಷಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಉಗ್ರರು ಭಾರತೀಯ ಸೇನೆಯ ಯೋಧರ ಸಮವಸ್ತ್ರ ಧರಿಸಿದ್ದರೆಂದೂ ಚಾಲಕ ತಿಳಿಸಿದ್ದಾರೆ ಎಂದುಎನ್‌ಡಿಟಿವಿವರದಿ ಮಾಡಿದೆ. ತಕ್ಷಣವೇ ಭದ್ರಾ ಸಿಬ್ಬಂದಿ ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ಸದ್ಯ, ಭಯೋತ್ಪಾದಕರು ಮನೆಯೊಂದಕ್ಕೆ ನುಗ್ಗಿದ್ದು ಭದ್ರತಾ ಸಿಬ್ಬಂದಿ ಜತೆ ಗುಂಡಿನ ಚಕಮಕಿ ನಡೆಸುತ್ತಿದ್ದಾರೆ.

ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಗಂದೇರ್‌ಬಾಲ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸುಮಾರು ಮೂವರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.